ADVERTISEMENT

ಬ್ಲಿಂಕನ್‌ ಭೇಟಿಯಾದ ವಿದೇಶಾಂಗ ಕಾರ್ಯದರ್ಶಿ ಶೃಂಗ್ಲಾ; ದ್ವಿಪಕ್ಷೀಯ ಒಪ್ಪಂದ ಚರ್ಚೆ

ಪಿಟಿಐ
Published 3 ಸೆಪ್ಟೆಂಬರ್ 2021, 6:24 IST
Last Updated 3 ಸೆಪ್ಟೆಂಬರ್ 2021, 6:24 IST
ವಾಷಿಂಗ್ಟನ್‌ನಲ್ಲಿ ಗುರುವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷರ್ವಧನ್ ಶೃಂಗ್ಲಾ(ಬಲಬದಿ) ಅವರು ಅಮೆರಿಕದ  ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಅವರನ್ನು ಭೇಟಿಯಾದರು.
ವಾಷಿಂಗ್ಟನ್‌ನಲ್ಲಿ ಗುರುವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷರ್ವಧನ್ ಶೃಂಗ್ಲಾ(ಬಲಬದಿ) ಅವರು ಅಮೆರಿಕದ  ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಅವರನ್ನು ಭೇಟಿಯಾದರು.   

ವಾಷಿಂಗ್ಟನ್‌: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಮತ್ತು ಉಪ ಕಾರ್ಯದರ್ಶಿ ವೆಂಡೈ ಶೆರ್ಮನ್‌ ಸೇರಿದಂತೆ ಜೋ ಬೈಡನ್ ಆಡಳಿತದ ಪ್ರಮುಖ ಅಧಿಕಾರಿಗಳನ್ನು ಭೇಟಿಯಾಗಿ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಕುರಿತು ಮಾತುಕತೆ ನಡೆಸಿದ್ದಾರೆ.

ಇದು, ಆ.31ರಂದು ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡ ನಂತರ, ಉಭಯ ದೇಶಗಳ ಅಧಿಕಾರಿಗಳ ನಡುವೆ ನಡೆಯುತ್ತಿರುವ ಉನ್ನತ ಮಟ್ಟದಮೊದಲ ಚರ್ಚೆಯಾಗಿದೆ.

ನ್ಯೂಯಾರ್ಕ್‌ನಿಂದ ಇಲ್ಲಿಗೆ ಬಂದ ಹರ್ಷವರ್ಧನ ಶೃಂಗ್ಲಾ ಅವರು, ಗುರುವಾರ ಬ್ಲಿಂಕನ್ ಅವರನ್ನು ಭೇಟಿಯಾದರು.

ADVERTISEMENT

‘ಉಭಯ ದೇಶಗಳ ನಾಯಕರ ನಡುವೆ ದ್ವಿಪಕ್ಷೀಯ ಒಪ್ಪಂದಗಳ ಜೊತೆಗೆ, ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ ನಡೆಯಿತು‘ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗಾಚಿ ಅವರು ಸಭೆಯ ನಂತರ ಟ್ವೀಟ್‌ ಮಾಡಿದ್ದಾರೆ. ಇದೇ ದಿನ ಶೃಂಗ್ಲಾ ಮತ್ತು ಅಮೆರಿಕ ಸರ್ಕಾರದ ಉಪ ಕಾರ್ಯದರ್ಶಿ ಶೆರ್ಮನ್ ನಡುವೆ ಸರಣಿ ಸಭೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.