ಜೆರುಸಲೇಂ: ‘ನಮ್ಮ ಪತ್ರಕರ್ತ ಅನಾಸ್–ಅಲ್–ಶರೀಫ್ ಅವರನ್ನು ಗಾಜಾದಲ್ಲಿ ಹತ್ಯೆ ಮಾಡಲಾಗಿದೆ’ ಎಂದು ಅಲ್ ಜಜೀರಾ ಸುದ್ದಿ ವಾಹಿನಿ ತಿಳಿಸಿದೆ.
ಅನಾಸ್ ಹಾಗೂ ಇತರ ಪತ್ರಕರ್ತರು ತಮ್ಮ ಸಿಬ್ಬಂದಿಯೊಂದಿಗೆ ಗಾಜಾದಲ್ಲಿ ಡೇರೆಯೊಂದರಲ್ಲಿದ್ದರು. ಅಲ್ಲಿ ಅವರೆಲ್ಲರನ್ನೂ ಹತ್ಯೆ ಮಾಡಲಾಗಿದೆ ಎಂದು ಗಾಜಾದ ಶಿಫಾ ಆಸ್ಪತ್ರೆಯ ಮಾಹಿತಿಯನ್ನು ಉಲ್ಲೇಖಿಸಿ ‘ಅಲ್ ಜಜೀರಾ’ ತಿಳಿಸಿದೆ. ಅನಾಸ್ ಅವರ ಸಾವನ್ನು ಇಸ್ರೇಲ್ ಸೇನೆಯು ಖಚಿತಪಡಿಸಿದೆ ಎಂದೂ ಹೇಳಿದೆ.
‘ಪತ್ರಕರ್ತರ ಸೋಗಿನಲ್ಲಿದ್ದ ಅನಾಸ್ ಹಮಾಸ್‌ಗೆ ಬೆಂಬಲ ನೀಡುತ್ತಿದ್ದ’ ಎಂದು ಇಸ್ರೇಲ್ ಸೇನೆಯು ಭಾನುವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಅನಾಸ್ ಅವರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಪತ್ರಕರ್ತರ ರಕ್ಷಣಾ ಸಮಿತಿಯು, ಅವರು ಇಸ್ರೇಲ್ ಸೇನೆಗೆ ಗುರಿಯಾಗಿದ್ದಾರೆ’ ಎಂದು ಕಳೆದ ತಿಂಗಳು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.