ADVERTISEMENT

ಗಾಜಾ: ಖಾನ್ ಯೂನಿಸ್‌ನಿಂದ ಹಿಂದೆ ಸರಿದ ಇಸ್ರೇಲ್ ಸೇನೆ

ಏಜೆನ್ಸೀಸ್
Published 8 ಏಪ್ರಿಲ್ 2024, 16:30 IST
Last Updated 8 ಏಪ್ರಿಲ್ 2024, 16:30 IST
   

ಜೆರುಸಲೇಂ: ಗಾಜಾ ಪಟ್ಟಿಯ ದಕ್ಷಿಣದಲ್ಲಿ ಇರುವ ಖಾನ್ ಯೂನಿಸ್ ನಗರದಿಂದ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ.

ಈ ನಡೆಯ ಪರಿಣಾಮವಾಗಿ ಈ ಪ್ರದೇಶದಲ್ಲಿರುವ ಇಸ್ರೇಲ್‌ನ ಸೇನಾ ಸಿಬ್ಬಂದಿಯ ಸಂಖ್ಯೆಯು ಹಮಾಸ್ ವಿರುದ್ಧದ ಸಮರ ಆರಂಭವಾದ ನಂತರದಲ್ಲಿನ ಕಡಿಮೆ ಮಟ್ಟ ತಲುಪಿದೆ. ಹಮಾಸ್ ಬಂಡುಕೋರರ ಕಡೆಯ ಭದ್ರನೆಲೆಯಾಗಿರುವ ರಫಾ ಮೇಲೆ ದಾಳಿ ನಡೆಸಲು ಸೇನೆ ಸಿದ್ಧತೆ ನಡೆಸುತ್ತಿದ್ದು ಅದಕ್ಕೆ ಪೂರಕವಾಗಿ ಸೇನಾ ಸಿಬ್ಬಂದಿಯ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಗಾಜಾದಲ್ಲಿ ಇಸ್ರೇಲ್‌ನ ಸೇನಾ ಸಿಬ್ಬಂದಿ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಅವರು ಖಾನ್ ಯೂನಿಸ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ನಿರ್ದಿಷ್ಟವಾಗಿ ಗುರಿ ಇರಿಸಿ ಕಾರ್ಯಾಚರಣೆ ಮುಂದುವರಿಸುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ರಫಾ ಮೇಲೆ ಭೂದಾಳಿ ನಡೆಸುವುದಾಗಿ ಇಸ್ರೇಲ್ ವಾರಗಳಿಂದ ಹೇಳುತ್ತಿದೆ. ಆದರೆ ಇಲ್ಲಿ 14 ಲಕ್ಷ ಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.