ADVERTISEMENT

ಗಾಜಾ ಶಾಂತಿ ಮಂಡಳಿ: ಪ್ರಧಾನಿ ಮೋದಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 23:30 IST
Last Updated 18 ಜನವರಿ 2026, 23:30 IST
ಯುದ್ಧ ಪೀಡಿತ ಗಾಜಾ (ಎಎಫ್‌ಪಿ ಚಿತ್ರ)
ಯುದ್ಧ ಪೀಡಿತ ಗಾಜಾ (ಎಎಫ್‌ಪಿ ಚಿತ್ರ)   

ವಾಷಿಂಗ್ಟನ್, ಅಮೆರಿಕ: ಯುದ್ಧಾನಂತರದ ಗಾಜಾದ ಆಡಳಿತ ಮತ್ತು ಪುನರ್‌ನಿರ್ಮಾಣವನ್ನು ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾದ ‘ಶಾಂತಿ ಮಂಡಳಿ’ ಮತ್ತು ಸಂಬಂಧಿತ ಸಮಿತಿಗಳ ಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಡಳಿತವು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಪಂಚದಾದ್ಯಂತ ವಿವಿಧ ದೇಶಗಳ ಪ್ರಮುಖರನ್ನು ಸಂಪರ್ಕಿಸಿದೆ.

ಟ್ರಂಪ್ ಅಧ್ಯಕ್ಷತೆಯಲ್ಲಿ ಒಂದು ಮುಖ್ಯ ಮಂಡಳಿ (ಶಾಂತಿ ಮಂಡಳಿ) ಇರಲಿದ್ದು, ಇದು ಗಾಜಾ ಪುನರ್‌ನಿರ್ಮಾಣ ಮತ್ತು ಪ್ರಾದೇಶಿಕ ಸಂಬಂಧಗಳ ಬಗ್ಗೆ ಉನ್ನತ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಂಡಳಿಯಾಗಿದೆ. ಇದರಲ್ಲಿ ಹೆಚ್ಚಿನವರು ಟ್ರಂಪ್ ಆಪ್ತರಷ್ಟೆ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT