ಬರ್ಲಿನ್: ಅಮೆರಿಕ ದಿಂದ ಬಯಸುವುದು ಗೌರವವೇ ಹೊರತು ಅಹಂಕಾರದ ಧೋರಣೆಯನ್ನಲ್ಲ ಎಂದು ಜರ್ಮನಿ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೇನ್ ಮೇರ್ ಹೇಳಿದ್ದಾರೆ.
ಬರ್ಲಿನ್ ಗೋಡೆ ನೆಲಸಮಗೊಂಡ 30ನೇ ವರ್ಷಾಚರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪೂರ್ವ ಮತ್ತು ಪಶ್ಚಿಮ ಜರ್ಮನಿಗಳು ಒಂದಾಗಲು ಅಮೆರಿಕದ ಪಾತ್ರ ಮಹತ್ವದ್ದು.
ಬ್ರಾಂಡೆನ್ ಬರ್ಗ್ ಗೇಟ್ ಬಳಿ ಹೋದರೆ ರೊನಾಲ್ಡ್ ರೇಗನ್ ಅವರ ‘ಈ ಗೋಡೆ ಉರುಳಿಸಿ’ ಎಂಬ ದನಿ ಕೇಳಿಸುತ್ತದೆ ಎಂದು ಸ್ಮರಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದಿಂದ ಅಮೆರಿಕವು ಪರಸ್ಪರ ಗೌರವಯುತ ಪಾಲುದಾರ ರಾಷ್ಟವಾಗಿದೆ. ಅಹಂಕಾರಯುತ ರಾಷ್ಟ್ರೀಯ ವಾದದಿಂದಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.