ADVERTISEMENT

ಕೊರೊನಾದಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ: ಜರ್ಮನಿಯ ವಿತ್ತ ಸಚಿವ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 17:12 IST
Last Updated 29 ಮಾರ್ಚ್ 2020, 17:12 IST
ಥಾಮಸ್ ಶೇಫೆರ್
ಥಾಮಸ್ ಶೇಫೆರ್   

ಫ್ರಾಂಕ್‌ಫರ್ಟ್:ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವ ಜರ್ಮನಿಯಲ್ಲಿ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಇದರಿಂದ ಮನನೊಂದು ಜರ್ಮನಿಯ ಹೆಸ್ಸೆ ರಾಜ್ಯದ ವಿತ್ತ ಸಚಿವ ಥಾಮಸ್ ಶೇಫೆರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

54ರ ಹರೆಯದ ಥಾಮಸ್ ಶೇಫೆರ್ ಅವರ ಮೃತದೇಹ ಶನಿವಾರ ರೈಲ್ವೆ ಹಳಿ ಬಳಿ ಪತ್ತೆಯಾಗಿದೆ.ಶೇಫೆರ್ ಸಾವು ಆತ್ಮಹತ್ಯೆಯಿಂದಾಗಿದ್ದು ಎಂದು ವಿಸ್‌ಬಡೇನ್ ವಿಚಾರಣಾ ಕಚೇರಿ ಹೇಳಿದೆ.

ನಮಗೆ ಗಾಬರಿಯಾಗಿದೆ. ನಮಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಬೇಸರದಿಂದಿದ್ದಾರೆ ಎಂದು ವಾಕರ್ ಬೊಫೇರ್ ಹೇಳಿದ್ದಾರೆ.

ADVERTISEMENT

ಜನಪ್ರಿಯ ಮತ್ತು ಗೌರವಾನ್ವಿತರಾದ ಥಾಮಸ್ ಶೇಫೆರ್, ವಾಕರ್ ಬೋಫೆರ್ ಅವರ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿತ್ತು.

ವಾಕರ್ ಬೋಫೆರ್ ಮತ್ತು ಥಾಮಸ್ ಶೇಫೆರ್ ಅವರು ಅಂಜೆಲ ಮೆರ್ಕೆಲ್ ಅವರ ಸಿಡಿಯು ಪಕ್ಷದವರಾಗಿದ್ದಾರೆ.ಶೇಫೆರ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.