ADVERTISEMENT

ಜರ್ಮನಿ: ಸಶಸ್ತ್ರ ದಂಗೆ ಸಂಚು ಶಂಕೆ, 25 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 13:25 IST
Last Updated 7 ಡಿಸೆಂಬರ್ 2022, 13:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರ್ಲಿನ್‌:ಸಶಸ್ತ್ರ ದಂಗೆಯಲ್ಲಿ ಸರ್ಕಾರವನ್ನು ಉರುಳಿಸಲು ಬಲಪಂಥೀಯ ತೀವ್ರಗಾಮಿಗಳು ಸಂಚು ರೂಪಿಸಿದ ಶಂಕೆ ಮೇಲೆ, ಸಾವಿರಾರು ಪೊಲೀಸರು ಜರ್ಮನಿಯ ಹಲವು ರಾಜ್ಯಗಳಲ್ಲಿ ಬುಧವಾರ ದಾಳಿಗಳನ್ನು ನಡೆಸಿ, 25 ಜನರನ್ನು ಬಂಧಿಸಿದರು.

‘ರೀಚ್ ಸಿಟಿಜನ್ಸ್ ಮೂವ್‌ಮೆಂಟ್’ ಎಂಬ ಸಂಘಟನೆಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಯಿತು. ಸುಮಾರು 3,000 ಅಧಿಕಾರಿಗಳು ಜರ್ಮನಿಯ 11 ರಾಜ್ಯಗಳ 130 ಸ್ಥಳಗಳಲ್ಲಿ ಶೋಧ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರ ಪೈಕಿ, 22 ಜನರು ಸಂಘಟನೆಯ ಸದಸ್ಯರು ಎನ್ನಲಾಗಿದೆ. ರಷ್ಯಾದ ಪ್ರಜೆ ಸೇರಿದಂತೆ ಇತರ ಮೂವರು ಈ ಸಂಘಟನೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕಾನೂನು ಸಚಿವ ಮಾರ್ಕೊ ಬುಷ್‌ಮನ್ ಅವರು ಈ ದಾಳಿಯನ್ನು ಭಯೋತ್ಪಾದನೆ ವಿರುದ್ದದ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ. ಶಂಕಿತರು ಸರ್ಕಾರದ ವಿವಿಧ ಸಂಸ್ಥೆಗಳ ಮೇಲೆ ಸಶಸ್ತ್ರ ದಾಳಿ ನಡೆಸಲು ಯೋಜಿಸಿರಬಹುದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.