ADVERTISEMENT

ಜರ್ಮನಿಯಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ, ಮತ್ತೆ ಲಾಕ್‌ಡೌನ್?

ಏಜೆನ್ಸೀಸ್
Published 10 ನವೆಂಬರ್ 2021, 15:34 IST
Last Updated 10 ನವೆಂಬರ್ 2021, 15:34 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬರ್ಲಿನ್: ಜರ್ಮನಿಯಲ್ಲಿ ಬುಧವಾರ ದಾಖಲೆ ಸಂಖ್ಯೆಯಲ್ಲಿ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಹೇಳಿದೆ.

‘ನಾವೀಗ ಲಸಿಕಾ ಅಭಿಯಾನವನ್ನು ತ್ವರಿತವಾಗಿ ವೇಗಗೊಳಿಸದಿದ್ದರೆ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಅಗತ್ಯ ಎದುರಾಗಬಹುದು. ತ್ವರಿತವಾಗಿ ಲಸಿಕೆ ಹಾಕದಿದ್ದರೆ ಒಂದು ಲಕ್ಷದಷ್ಟು ಜನರು ಸಾವಿಗೀಡಾಗಬಹುದು’ ಎಂದು ಬರ್ಲಿನ್‌ನ ಚಾರಿಟ್ ಆಸ್ಪತ್ರೆಯ ವೈರಾಲಜಿ ವಿಭಾಗದ ಮುಖ್ಯಸ್ಥ ಕ್ರಿಶ್ಚಿಯನ್ ಡ್ರೊಸ್ಟೆನ್ ಅವರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ದೇಶದಾದ್ಯಂತ ಒಟ್ಟು 37,120 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಸಂಖ್ಯೆ ಬುಧವಾರದ ವೇಳೆಗೆ 39,676ಕ್ಕೆ ಏರಿಕೆ ಕಂಡಿದೆ. 7 ದಿನಗಳಲ್ಲಿ ಪ್ರತಿ ಲಕ್ಷ ಮಂದಿಗೆ ಹೊಸ ಸೋಂಕಿನ ಪ್ರಕರಣಗಳ ಪ್ರಮಾಣವು 232.1 ಅಗಿದೆ ಎಂದು ಅಲ್ಲಿನ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.