ADVERTISEMENT

ಐಎಂಎಫ್‌ ಮುಖ್ಯ ಆರ್ಥಿಕತಜ್ಞೆಯಾಗಿ ಮೈಸೂರಿನ ಗೀತಾ ಗೋಪಿನಾಥ್‌ ಅಧಿಕಾರ ಸ್ವೀಕಾರ

‘ಐಎಂಎಫ್‌’ನ ಉನ್ನತ ಹುದ್ದೆಗೇರಿದ ಮೊದಲ ಮಹಿಳೆ

ಪಿಟಿಐ
Published 8 ಜನವರಿ 2019, 10:33 IST
Last Updated 8 ಜನವರಿ 2019, 10:33 IST
ಗೀತಾ ಗೋಪಿನಾಥ್‌
ಗೀತಾ ಗೋಪಿನಾಥ್‌   

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯಆರ್ಥಿಕತಜ್ಞೆಯಾಗಿಮೈಸೂರಿನ ಗೀತಾ ಗೋಪಿನಾಥ್‌ (47)ಅಧಿಕಾರ ಸ್ವೀಕರಿಸಿದ್ದಾರೆ. ತನ್ಮೂಲಕ ‘ಐಎಂಎಫ್‌’ನ ಈ ಉನ್ನತ ಹುದ್ದೆಗೆ ಏರಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡಿಸೆಂಬರ್‌ 31ರಂದು ಸೇವಾ ನಿವೃತ್ತರಾಗಿರುವ ಐಎಂಎಫ್‌ನ ಸಂಶೋಧನಾ ವಿಭಾಗದ ನಿರ್ದೇಶಕ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ಮೌರೈಸ್‌ ಆಬ್ಸ್ಟ್‌ಫೆಲ್ಡ್‌ ಅವರ ಉತ್ತರಾಧಿಕಾರಿಯಾಗಿ ಗೀತಾ ಅವರು ಕಾರ್ಯನಿರ್ವಹಿಸಲಿದ್ದಾರೆ.

ADVERTISEMENT

ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್‌ ಲಗಾರ್ಡ್‌ ಅವರು ಗೀತಾ ಅವರನ್ನು ಈ ಹುದ್ದೆಗೆ ನೇಮಿಸುವ ಸಂಬಂಧ ಕಳೆದ ವರ್ಷದ ಅಕ್ಟೋಬರ್‌ 1ರಂದು ಆದೇಶ ಹೊರಡಿಸಿದ್ದರು.

ಈ ಹುದ್ದೆಗೆ ಏರಿದ ಭಾರತದ ಎರಡನೇ ಅರ್ಥಶಾಸ್ತ್ರಜ್ಞೆ ಇವರಾಗಿದ್ದಾರೆ. ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರು ಇದಕ್ಕೂ ಮೊದಲು ಈ ಹುದ್ದೆ ಅಲಂಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.