ADVERTISEMENT

Covid-19 World Update: 24 ಗಂಟೆಗಳಲ್ಲಿ 3,062 ಸಾವು, 61,923 ಸೋಂಕು ಪ್ರಕರಣ

ಏಜೆನ್ಸೀಸ್
Published 5 ಮೇ 2020, 5:44 IST
Last Updated 5 ಮೇ 2020, 5:44 IST
ಆರೋಗ್ಯ ಕಾರ್ಯಕರ್ತರು  (ಪ್ರಾತಿನಿಧಿಕ ಚಿತ್ರ)
ಆರೋಗ್ಯ ಕಾರ್ಯಕರ್ತರು (ಪ್ರಾತಿನಿಧಿಕ ಚಿತ್ರ)   

ವಾಷಿಂಗ್ಟನ್: ಕೊರೊನಾ ವೈರಸ್‌ ಸೋಂಕಿನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ ಸೋಮವಾರ ರಾತ್ರಿವೇಳೆಗೆ 2.50 ಲಕ್ಷ ತಲುಪಿದೆ. ಇಲ್ಲಿಯವರಿಗೆ 3.5 ದಶಲಕ್ಷ ಜನರಿಗೆ ಸೋಂಕು ತಗಲಿರುವುದಾಗಿ ರಾಯಿಟರ್ಸ್ ಅಂಕಿ ಅಂಶಗಳು ಹೇಳಿವೆ.

ಕಳೆದ 24 ಗಂಟೆಗಳಲ್ಲಿ 3,062 ಹೊಸ ಸಾವು ಪ್ರಕರಣಗಳು ಮತ್ತು 61,923 ಸೋಂಕುಪ್ರಕರಣಗಳು ವರದಿಯಾಗಿವೆ. ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 3.58 ದಶಲಕ್ಷ ಆಗಿದೆ.

ಉತ್ತರ ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಹೊಸ ಸೋಂಕುಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ರಷ್ಯಾದಲ್ಲಿಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ADVERTISEMENT

ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಅಂಕಿಅಂಶಗಳ ಪ್ರಕಾರ ಸೋಂಕಿತರ ಸಂಖ್ಯೆ 3,584.118 ಆಗಿದೆ. ಅಮೆರಿಕದಲ್ಲಿ 1180643, ಸ್ಪೇನ್ -218011, ಇಟಲಿ-211938, ಬ್ರಿಟನ್- 191832, ಫ್ರಾನ್ಸ್-169583 ಮಂದಿ ಸೋಂಕಿತರಿದ್ದಾರೆ.
ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 2,51,562. ಅಮೆರಿಕದಲ್ಲಿ 68,934 ಮಂದಿ ಸಾವಿಗೀಡಾಗಿದ್ದು ಇಟಲಿಯಲ್ಲಿ 29079 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.