ADVERTISEMENT

ಕೋವಿಡ್‌–19: ವಿಶ್ವದಾದ್ಯಂತ ಸೋಂಕಿತರು 4.5 ಲಕ್ಷ, ಸಾವಿನ ಸಂಖ್ಯೆ 20,334

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 2:38 IST
Last Updated 26 ಮಾರ್ಚ್ 2020, 2:38 IST
ಚಿತ್ರ ಕೃಪೆ: ಫ್ರಾನ್ಸ್24
ಚಿತ್ರ ಕೃಪೆ: ಫ್ರಾನ್ಸ್24   

ನವದೆಹಲಿ: ವಿಶ್ವದಾದ್ಯಂತ ಕೋವಿಡ್‌–19 ಸೋಂಕಿಗೆ ಬಲಿಯಾದವರ ಸಂಖ್ಯೆ 20,334ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಸಾವು ಯುರೋಪ್ ರಾಷ್ಟ್ರಗಳಲ್ಲೇ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಬುಧವಾರ ರಾತ್ರಿ ವೇಳೆಗೆ ವಿಶ್ವದಾದ್ಯಂತ 20 ಸಾವಿರಕ್ಕೂ ಹೆಚ್ಚು ಜನರು ಕೋವಿಡ್–19ಗೆ ಬಲಿಯಾಗಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯುರೋಪ್‌ ರಾಷ್ಟ್ರಗಳಲ್ಲಿ ಒಟ್ಟು 13,581 ಜನರು ಬಲಿಯಾಗಿದ್ದಾರೆ. ಇಟಲಿ ಮತ್ತು ಸ್ಪೇನ್‌ ದೇಶಗಳಲ್ಲಿ ಹೆಚ್ಚು ಸಾವು ಸಂಭವಿಸಿವೆ. ಕೊರೊನಾ ಸೋಂಕು ಹರಡಿದ ಚೀನಾದಲ್ಲಿ 3287 ಜನರು ಮೃತಪಟ್ಟಿದ್ದು ಅಲ್ಲಿಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ADVERTISEMENT

ಇಂಗ್ಲೆಂಡ್‌ ದೇಶದಲ್ಲೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಅಲ್ಲಿ ಮೃತರ ಸಂಖ್ಯೆ 463ಕ್ಕೆ ಏರಿಕೆಯಾಗಿದೆ. ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 4.5 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಕೊರೊನಾ ಸೋಂಕು ವಿಶ್ವದ 182 ದೇಶಗಳಿಗೆ ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.