ADVERTISEMENT

ಸಾಬೀತಾಗದ ಚಿಕಿತ್ಸಾ ವಿಧಾನದ ಜಾಹೀರಾತು ನಿಷೇಧ

ಆಕರಕೋಶ, ಜೀನ್ ಥೆರಪಿಯ ಜಾಹೀರಾತುಗಳಿಗೂ ಕಡಿವಾಣ

ಏಜೆನ್ಸೀಸ್
Published 7 ಸೆಪ್ಟೆಂಬರ್ 2019, 20:15 IST
Last Updated 7 ಸೆಪ್ಟೆಂಬರ್ 2019, 20:15 IST
   

ಸ್ಯಾನ್‌ಫ್ರಾನ್ಸಿಸ್ಕೊ (ಎಎಫ್‌ಪಿ): ಆಕರ ಕೋಶ (ಸ್ಟೆಮ್ ಸೆಲ್), ಜೀನ್ ಥೆರಪಿ ಮತ್ತು ಸಾಬೀತಾಗದ ವೈದ್ಯಕೀಯ ಚಿಕಿತ್ಸೆಗಳಿಗೆ ಸಂಬಂಧಿಸಿದ ಆನ್‌ಲೈನ್ ಜಾಹೀರಾತುಗಳನ್ನು ನಿಷೇಧಿಸುವುದಾಗಿ ಗೂಗಲ್ ಹೇಳಿದೆ.

‘ಗೂಗಲ್ ಈ ಹೊಸನೀತಿಯು ಸ್ಥಾಪಿತ ಬಯೋಮೆಡಿಕಲ್ ಅಥವಾ ವೈಜ್ಞಾನಿಕ ಆಧಾರಗಳಿಲ್ಲದ ಜಾಹೀರಾತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಿದೆ’ ಎಂದು ಗೂಗಲ್‌ ನೀತಿ ಸಲಹೆಗಾರ್ತಿ ಆ್ಯಡ್ರಿಯೆನ್ ಬಿಡ್ಡಿಂಗ್ಸ್ ತಮ್ಮ ಬ್ಲಾಗ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಫೇಸ್‌ಬುಕ್ ಮತ್ತು ಗೂಗಲ್ ಒಡೆತನ ಯೂಟ್ಯೂಬ್‌ಗಳಲ್ಲಿ ಕ್ಯಾನ್ಸರ್‌ಗೆ ಕುರಿತಂತೆ ನಕಲಿ ಚಿಕಿತ್ಸಾ ವಿಧಾನಗಳು ವ್ಯಾಪಕವಾಗಿ ಹರಡುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ನಂತರ, ಆರೋಗ್ಯದ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳ ನಿಷೇಧಕ್ಕೆ ಗೂಗಲ್ ಮುಂದಾಗಿದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.