ADVERTISEMENT

ಜರ್ಮನಿಯ ಮ್ಯೂನಿಕ್‌ ನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 11:30 IST
Last Updated 1 ಡಿಸೆಂಬರ್ 2022, 11:30 IST
ತಾಯಿ ಭುವನೇಶ್ವರಿಯ ಪಲ್ಲಕ್ಕಿ ಮೆರವಣಿಗೆ
ತಾಯಿ ಭುವನೇಶ್ವರಿಯ ಪಲ್ಲಕ್ಕಿ ಮೆರವಣಿಗೆ   

ಮ್ಯೂನಿಕ್‌ (ಜರ್ಮನಿ): ಇಲ್ಲಿನಸಿರಿಗನ್ನಡಕೂಟ ಸಂಭ್ರಮದಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿತು.

ಭಾರತೀಯ ರಾಯಭಾರಿ ಕಚೇರಿಯ ಸಾಂಸ್ಕೃತಿಕ ಮುಖ್ಯಸ್ಥ ಕೈಲಾಶ್ ಭಟ್ ಅವರು ದೀಪ ಬೆಳಗಿಸಿ ಅಧಿಕೃತವಾಗಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಿನ್ ಸಿನಾಟಿ ಕೀನೊಯಲ್ಲಿ ಅದ್ದೂರಿಯಾಗಿ ದಿನಪೂರ್ತಿ ಕಾರ್ಯಕ್ರಮ ನೆರವೇರಿತು.ತಾಯಿ ಭುವನೇಶ್ವರಿಯ ಪಲ್ಲಕ್ಕಿ ಮೆರವಣಿಗೆ ನಡೆದದ್ದು ವಿಶೇಷ.

ADVERTISEMENT
ಕಾರ್ಯಕ್ರಮಕ್ಕದಲ್ಲಿ ನೆರೆದಿದ್ದ ಜನ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳ ಮೇಲೆ ರಸಪ್ರಶ್ನೆ ಕಾರ್ಯಕ್ರಮ,ಚಿಣ್ಣರಿಂದ ಗಾಯನ, ನೃತ್ಯ ಪ್ರದರ್ಶನ, ದಶಾವತಾರ ನೃತ್ಯ ರೂಪಕ, ಯಕ್ಷಗಾನ ಬಾಲ ಗೋಪಾಲ, ಭರತನಾಟ್ಯ, ಹಾಸ್ಯ ನೃತ್ಯ ರೂಪಕ,ವಿವಿಧ ಪ್ರಕಾರದ ಗೀತೆಗಳ ಪ್ರಸ್ತುತಿ,ವನಿತೆಯರಿಂದ ಕಂಸಾಳೆ ನೃತ್ಯ, ಸ್ವರ ತರಂಗ, ಮ್ಯೂಸಿಕಲ್ ಬ್ಯಾಂಡ್ ನಿಂದ ಹಾಡುಗಾರಿಕೆ, ಹಾಸ್ಯ ನಾಟಕ, ಫ್ರೀಸ್ಟೈಲ್ ನೃತ್ಯ ಪ್ರದರ್ಶನ ಹಾಗೂ ಮೊದಲ ಬಾರಿಗೆ ಯಕ್ಷಮಿತ್ರರು ಜರ್ಮನಿ ಹವ್ಯಾಸಿ ಕಲಾ ತಂಡದವರಿಂದ
ಯಕ್ಷಗಾನ ಪ್ರದರ್ಶನ ನಡೆಯಿತು.

ಇಲ್ಲಿನ ಬವೇರಿಯಾ ರಾಜ್ಯದಿಂದ ಸಿರಿಗನ್ನಡಕೂಟವು ಹಲವಾರು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಿಕೊಂಡು ಬರುತ್ತಿದೆ. ಈಗಾಗಲೇ ಕೂಟವು ಹಲವಾರು ಕನ್ನಡ ಕಾರ್ಯಕ್ರಮಗಳನ್ನು ನಡೆಸಿದೆ. ಮಹಿಳಾ ದಿನಾಚರಣೆ, ನಟ ಪುನೀತ್‌ ನೆನಪಿಗೆ ‘ಪುನೀತ್‌ ವಸಂತೋತ್ಸವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು ಎಂದು ಸಿರಿಗನ್ನಡಕೂಟದಕಮಲಾಕ್ಷ ಎಚ್.ಎ ಹೇಳಿದ್ದಾರೆ.

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮ್ಯೂನಿಕ್‌ನ ಸುತ್ತಮುತ್ತ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.