‘ದಿ ಅಬ್ಸರ್ವರ್’ ಪತ್ರಿಕೆ
ಚಿತ್ರ ಕೃಪೆ: ಎಕ್ಸ್ @soniasodha
ಲಂಡನ್: ಬ್ರಿಟನ್ ಮಾಧ್ಯಮ ಲೋಕದ ಪ್ರಗತಿಪರ ಮೌಲ್ಯಗಳ ಪ್ರತಿಪಾದಕ, ಜಗತ್ತಿನ ಅತ್ಯಂತ ಹಳೆಯದಾದ ಭಾನುವಾರದ ಪತ್ರಿಕೆ ‘ದಿ ಅಬ್ಸರ್ವರ್’ ಅನ್ನು ಗಾರ್ಡಿಯನ್ ಮೀಡಿಯಾ ಸಮೂಹವು ಟಾರ್ಟಾಯ್ಸ್ ಮೀಡಿಯಾಗೆ ಮಾರಾಟ ಮಾಡಿದೆ.
ಗಾರ್ಡಿಯನ್ ಮೀಡಿಯಾ ಸಮೂಹದ ಮಾಲೀಕ ಸಂಸ್ಥೆ ‘ಸ್ಕಾಟ್ ಟ್ರಸ್ಟ್’ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಪತ್ರಿಕೆಯನ್ನು ಎಷ್ಟು ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ಟ್ರಸ್ಟ್ ಬಹಿರಂಗಪಡಿಸಿಲ್ಲ. ಆದರೆ, ಎರಡೂ ಕಂಪನಿಗಳ ಮಧ್ಯೆ ಮಾರಾಟವು ಷೇರು ಖರೀದಿ ಹಾಗೂ ಹೂಡಿಕೆ ಷರತ್ತುಗಳ ಮೂಲಕ ನಡೆದಿದೆ ಎಂದು ಹೇಳಿದೆ.
1791ರಲ್ಲಿ ‘ದಿ ಅಬ್ಸರ್ವರ್’ ಆರಂಭವಾಗಿತ್ತು. ನಂತರ 1993ರಲ್ಲಿ ಗಾರ್ಡಿಯನ್ ಮೀಡಿಯಾ ಸಮೂಹವು ಈ ಪತ್ರಿಕೆಯನ್ನು ಖರೀದಿಸಿತು. ಗಾರ್ಡಿಯನ್ ಮೀಡಿಯಾ ಸಮೂಹದ ಪತ್ರಕರ್ತರು ಪತ್ರಿಕೆಯ ಮಾರಾಟವನ್ನು ವಿರೋಧಿಸಿದ್ದು, ಈ ತಿಂಗಳ ಆರಂಭದಲ್ಲಿಯೇ 48 ಗಂಟೆಗಳ ಪ್ರತಿಭಟನೆಯನ್ನೂ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.