ADVERTISEMENT

ಗುಂಡಿನ ದಾಳಿ: ಮಹಿಳೆಯರ ಸಾವು

ಏಜೆನ್ಸೀಸ್
Published 14 ಜುಲೈ 2025, 13:12 IST
Last Updated 14 ಜುಲೈ 2025, 13:12 IST
---
---   

ಲೆಕ್ಸಿಂಗ್ಟನ್: ಅಪಹರಿಸಿದ್ದ ಕಾರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಇಲ್ಲಿನ ಕೆಂಟಕಿ ಚರ್ಚ್‌ ಬಳಿ ತಡೆದಾಗ ಶಂಕಿತ ವ್ಯಕ್ತಿ ಗುಂಡು ಹಾರಿಸಿದ್ದರಿಂದ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ. ಆನಂತರ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಶಂಕಿತ ಕೂಡ ಬಲಿಯಾಗಿದ್ದಾನೆ. ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿವೆ.

ಅಮೆರಿಕದ ಲೆಕ್ಸಿಂಗ್ಟನ್‌ ವಿಮಾನ ನಿಲ್ದಾಣ ಸಮೀಪದ ರಿಚ್‌ಮಂಡ್‌ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಕಾರನ್ನು ತಡೆದಿದ್ದರು. ಈ ವೇಳೆ ಶಂಕಿತನು ಮನಬಂದಂತೆ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ 72 ವರ್ಷ ಮತ್ತು 32 ವರ್ಷದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇತರೆ ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ಲಾರೆನ್ಸ್ ವೆದರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT