ADVERTISEMENT

ಕ್ಯಾಮರೂನ್‌ನಲ್ಲಿ ಗುಂಡಿನ ದಾಳಿ: ದಾಳಿಕೋರ ಪರಾರಿ, 4 ಗ್ರಾಮಗಳಲ್ಲಿ 7 ಮಂದಿ ಸಾವು

ಏಜೆನ್ಸೀಸ್
Published 17 ಜೂನ್ 2022, 3:03 IST
Last Updated 17 ಜೂನ್ 2022, 3:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಯವೌಂಡೆ (ಕ್ಯಾಮರೂನ್):ಬಂದೂಕುಧಾರಿಯೊಬ್ಬ ಈಶಾನ್ಯ ಕ್ಯಾಮರೂನ್‌ನ ನಾಲ್ಕು ಹಳ್ಳಿಗಳಲ್ಲಿ ನಡೆಸಿದ ಗುಂಡಿನ ದಾಳಿ ವೇಳೆ 7 ಮಂದಿ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಎಕೆ–47 ಮಾದರಿಯ ಶಸ್ತ್ರ ಮತ್ತು ನಾಲ್ಕು ಮ್ಯಾಗಜಿನ್‌ಗಳನ್ನು ಹೊಂದಿದ್ದ ಬಂದೂಕುಧಾರಿ, ನಾಲ್ಕು ಗ್ರಾಮಗಳಲ್ಲಿ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಕ್ಯಾಮರೂನ್‌ನ ಅಡಮಾವದ ಈಶಾನ್ಯ ಭಾಗದ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸೋಮವಾರ ಗುಂಡಿನ ದಾಳಿ ನಡೆದಿದೆ. 7 ಮಂದಿ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಸ್ಥಳೀಯ ಟಿವಿ ವಾಹಿನಿ ಕ್ಯಾಮರೂನ್‌ ರೇಡಿಯೊ ಟೆಲಿವಿಷನ್‌ (ಸಿಆರ್‌ಟಿವಿ) ಖಚಿತಪಡಿಸಿದೆ.

ADVERTISEMENT

ದಾಳಿ ವೇಳೆ ನಾಲ್ಕು ಮಂದಿ ಸ್ಥಳದಲ್ಲೇ ಸಾವನಪ್ಪಿದ್ದು, ಉಳಿದ ಮೂವರು ಆಸ್ಪತ್ರೆಗೆ ಕರೆದೊಯ್ಯವಾಗ ಕೊನೆಯುಸಿರೆಳದಿದ್ದಾರೆ. ಸದ್ಯ ದಾಳಿಕೋರ ಪರಾರಿಯಾಗಿದ್ದಾನೆ. ದಾಳಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸಿಆರ್‌ಟಿವಿ ವರದಿ ಮಾಡಿದೆ.

ಕ್ಯಾಮರೂನ್‌, ಮಧ್ಯ ಆಫ್ರಿಕಾದ ರಾಷ್ಟ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.