ADVERTISEMENT

ನೈಜೀರಿಯಾ: ಬಂದೂಕುಧಾರಿಗಳ ದಾಳಿಗೆ 50 ಮಂದಿ ಸಾವು‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 11:08 IST
Last Updated 7 ಏಪ್ರಿಲ್ 2023, 11:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಬುಜಾ: ನೈಜೀರಿಯಾದ ಗ್ರಾಮವೊಂದರ ಮೇಲೆ ನಡೆದ ಎರಡು ದಾಳಿಗಳಲ್ಲಿ ಬಂದೂಕುಧಾರಿಗಳು ಕನಿಷ್ಠ 50 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯಾಕಾಂಡ ನಡೆದ ಒಟುಕ್ಪೊ ಗ್ರಾಮದ ಅಧ್ಯಕ್ಷ ರೂಬೆನ್ ಬಾಕೊ, ಬೆನ್ಯೂ ರಾಜ್ಯದ ಉಮೊಗಿಡಿ ಗ್ರಾಮದಲ್ಲಿ ಬಂದೂಕುಧಾರಿಗಳು ಬುಧವಾರ 47 ಜನರನ್ನು ಕೊಲೆ ಮಾಡಿದ್ದಾರೆ. ಬುಧವಾರ ಅದೇ ಸ್ಥಳದಲ್ಲಿ ಇತರ ಮೂವರನ್ನು ಕೊಲೆ ಮಾಡಲಾಗಿತ್ತು ಎಂದು ಅವರು ಹೇಳಿದರು.

ಗುಂಡಿನ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎರಡು ದಾಳಿಗೂ ಸಂಬಂಧ ಇದೆ ಎಂಬುದನ್ನು ಪೊಲೀಸರು ಖಚಿತ ಪಡಿಸಿದ್ದಾರೆ. ಈವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಉತ್ತರ-ಮಧ್ಯ ನೈಜೀರಿಯಾದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ರೈತರೊಂದಿಗೆ ಘರ್ಷಣೆ ನಡೆಸಿದ ಸ್ಥಳೀಯ ದನಗಾಹಿಗಳ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.