ADVERTISEMENT

ಮಾರ್ಚ್‌ 22ಕ್ಕೆ ಎಚ್‌–1ಬಿ ವೀಸಾ ನೋಂದಣಿ ಮುಕ್ತಾಯ

ಪಿಟಿಐ
Published 19 ಮಾರ್ಚ್ 2024, 13:11 IST
Last Updated 19 ಮಾರ್ಚ್ 2024, 13:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಾಷಿಂಗ್ಟನ್‌: ಅಧ್ಯಕ್ಷ ಜೋ ಬೈಡನ್‌ ಸರ್ಕಾರವು 2025ನೇ ಆರ್ಥಿಕ ಸಾಲಿನಡಿ ನೀಡಲು ಉದ್ದೇಶಿಸಿರುವ ಎಚ್‌–1ಬಿ ವೀಸಾ ನೋಂದಣಿ ಪ್ರಕ್ರಿಯೆಯು ಮಾರ್ಚ್‌ 22ರಂದು ಮುಕ್ತಾಯಗೊಳ್ಳಲಿದೆ.

ಎಚ್‌–1ಬಿ ವಲಸೆಯೇತರ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ತಾಂತ್ರಿಕ ನೈಪುಣ್ಯಕ್ಕೆ ಅನುಗುಣವಾಗಿ ನೇಮಕಾತಿ ನಡೆಯುತ್ತದೆ. ಈ ವೀಸಾ ಅಡಿಯಲ್ಲಿ ಪ್ರತಿವರ್ಷ ಭಾರತ ಹಾಗೂ ಚೀನಾದಿಂದ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಏಪ್ರಿಲ್‌ 1ರಿಂದ ಆನ್‌ಲೈನ್‌ನಲ್ಲಿ ನೋಂದಣಿ ಆರಂಭವಾಗಲಿದೆ. 

ADVERTISEMENT

ವಾರ್ಷಿಕವಾಗಿ ಈ ವೀಸಾ ಹಂಚಿಕೆಗೆ ಸರ್ಕಾರವು ಗುರಿ ನಿಗದಿಪಡಿಸುತ್ತದೆ. ಗುರಿ ಮೀರಿದ ಬಳಿಕ ಸ್ನಾತಕೋತ್ತರ ಪದವಿ ಹಾಗೂ ಇತರೆ ಪದವಿಗಳ ಅಧ್ಯಯನಕ್ಕೆ ಹೆಚ್ಚುವರಿ ವೀಸಾ ನೀಡಲಾಗುತ್ತದೆ. ಇದರ ಆನ್‌ಲೈನ್‌ ನೋಂದಣಿ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.