ADVERTISEMENT

ಹಫೀಜ್‌ ವಿರುದ್ಧ ದೋಷಾರೋಪ ಇಲ್ಲ

ಪಿಟಿಐ
Published 7 ಡಿಸೆಂಬರ್ 2019, 19:45 IST
Last Updated 7 ಡಿಸೆಂಬರ್ 2019, 19:45 IST
ಲಾಹೋರ್ ಹೈಕೋರ್ಟ್‌ಗೆ ಹಫೀಜ್‌ ಸಯೀದ್‌ನನ್ನು ವಿಚಾರಣೆಗಾಗಿ ಶನಿವಾರ ಕರೆತರಲಾಯಿತು ಪಿಟಿಐ ಚಿತ್ರ
ಲಾಹೋರ್ ಹೈಕೋರ್ಟ್‌ಗೆ ಹಫೀಜ್‌ ಸಯೀದ್‌ನನ್ನು ವಿಚಾರಣೆಗಾಗಿ ಶನಿವಾರ ಕರೆತರಲಾಯಿತು ಪಿಟಿಐ ಚಿತ್ರ   

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಮತ್ತು ನಿಷೇಧಿತ ಜೆಯುಡಿ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ವಿರುದ್ಧಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಅಧಿಕಾರಿಗಳು ಶನಿವಾರ ಸಲ್ಲಿಸಲಿಲ್ಲ.

ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಫೀಜ್‌ ಸಹಚರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿಯೂ ಅಧಿಕಾರಿಗಳು ವಿಫಲರಾದರು. ಇದರಿಂದ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಇದೇ 11ಕ್ಕೆ ನಿಗದಿಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT