ADVERTISEMENT

ಇಸ್ರೇಲ್‌ ದಾಳಿ: ಕಮಾಂಡರ್‌ ಸಾವು ಖಚಿತಪಡಿಸಿದ ಹಮಾಸ್

ಏಜೆನ್ಸೀಸ್
Published 14 ಡಿಸೆಂಬರ್ 2025, 16:08 IST
Last Updated 14 ಡಿಸೆಂಬರ್ 2025, 16:08 IST
   

ಜೆರುಸಲೇಮ್: ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಸಂಘಟನೆಯ ಉನ್ನತ ಕಮಾಂಡರ್ ರಯೀದ್‌ ಸಾದ್‌ ಮೃತಪಟ್ಟಿರುವುದನ್ನು ಹಮಾಸ್‌ ಭಾನುವಾರ ಖಚಿತಪಡಿಸಿದೆ.

‘ಸಾದ್‌, ಶಸ್ತ್ರಾಸ್ತ್ರಗಳು ಹಾಗೂ ಸೇನೆಯ ವಿವಿಧ ಉಪಕರಣಗಳ ತಯಾರಿಕೆ ಘಟಕದ ಕಮಾಂಡರ್‌ ಆಗಿದ್ದ’ ಎಂದೂ ಹಮಾಸ್‌ ತಿಳಿಸಿದೆ.

‘ಗಾಜಾ ನಗರದ ಹೊರವಲಯದಲ್ಲಿ ಶನಿವಾರ ತಾನು ನಡೆಸಿದ್ದ ದಾಳಿಯಲ್ಲಿ ಸಾದ್‌ನನ್ನು ಹತ್ಯೆ ಮಾಡಲಾಗಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ನಡೆದ ದಾಳಿಯ ಸೂತ್ರಧಾರನೇ ಸಾದ್’ ಎಂದು ಇಸ್ರೇಲ್‌ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.