ADVERTISEMENT

ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಸಮ್ಮತಿ

ಏಜೆನ್ಸೀಸ್
Published 13 ಫೆಬ್ರುವರಿ 2025, 11:38 IST
Last Updated 13 ಫೆಬ್ರುವರಿ 2025, 11:38 IST
ಹಮಾಸ್‌ನ ಒತ್ತೆಯಾಳುಗಳಾಗಿರುವ ಇಸ್ರೇಲ್ ಪ್ರಜೆಗಳ ಬಿಡುಗಡೆಗೆ ಒತ್ತಾಯಿಸಿ ಅವರ ಸಂಬಂಧಿಕರು ಗುರುವಾರ ಟೆಲ್ ಅವೀವ್‌ನಲ್ಲಿರುವ ಅಯಲೊನ್ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು
ಹಮಾಸ್‌ನ ಒತ್ತೆಯಾಳುಗಳಾಗಿರುವ ಇಸ್ರೇಲ್ ಪ್ರಜೆಗಳ ಬಿಡುಗಡೆಗೆ ಒತ್ತಾಯಿಸಿ ಅವರ ಸಂಬಂಧಿಕರು ಗುರುವಾರ ಟೆಲ್ ಅವೀವ್‌ನಲ್ಲಿರುವ ಅಯಲೊನ್ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು   

ಕೈರೊ: ಕದನ ವಿರಾಮ ಒಪ್ಪಂದದಂತೆ, ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಗುರುವಾರ ತಿಳಿಸಿದೆ. ಇದರಿಂದ, ಗಾಜಾಪಟ್ಟಿಗೆ ಸಂಬಂಧಿಸಿ ಏರ್ಪಟ್ಟಿರುವ ಕದನ ವಿರಾಮ ಕುರಿತು ಎದ್ದಿದ್ದ ವಿವಾದವೊಂದು ನಿವಾರಣೆಯಾದಂತಾಗಿದೆ. 

‘ಕದನ ವಿರಾಮ ಒಪ್ಪಂದ ಜಾರಿಗೆ ಎದುರಾಗುವ ಎಲ್ಲ ಅಡ್ಡಿಗಳನ್ನು ನಿವಾರಣೆ ಮಾಡುವುದಾಗಿ ಈ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್‌ ಮತ್ತು ಕತಾರ್‌ ನಾಯಕರು ಖಚಿತ ಪಡಿಸಿದ್ದಾರೆ’ ಎಂದು ಹಮಾಸ್‌ ಹೇಳಿದೆ. 

ಇಸ್ರೇಲ್‌ನ ಮತ್ತಷ್ಟು ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಹಮಾಸ್‌ ವಿರುದ್ಧ ಮತ್ತೆ ಯುದ್ಧ ಆರಂಭಿಸುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ, ಹಮಾಸ್‌ನಿಂದ ಈ ಹೇಳಿಕೆ ಹೊರಬಿದ್ದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.