ADVERTISEMENT

ಅಮೆರಿಕ ಕ್ರೈಸ್ತರ ದೇಶ;ಇಲ್ಲೇಕೆ ಹಿಂದೂಗಳ ನಕಲಿ ದೇವರು: ರಿಪಬ್ಲಿಕನ್ ನಾಯಕನ ವಿವಾದ

ಏಜೆನ್ಸೀಸ್
Published 23 ಸೆಪ್ಟೆಂಬರ್ 2025, 5:09 IST
Last Updated 23 ಸೆಪ್ಟೆಂಬರ್ 2025, 5:09 IST
<div class="paragraphs"><p>ಹನುಮಾನ್‌ ಪ್ರತಿಮೆಯ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ರಿಪಬ್ಲಿಕನ್‌ ಪಕ್ಷದ ನಾಯಕ</p></div>

ಹನುಮಾನ್‌ ಪ್ರತಿಮೆಯ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ರಿಪಬ್ಲಿಕನ್‌ ಪಕ್ಷದ ನಾಯಕ

   

ಚಿತ್ರಕೃಪೆ: ಎಕ್ಸ್‌

ವಾಷಿಂಗ್ಟನ್‌: ‘ಅಮೆರಿಕ ಕ್ರಿಶ್ಚಿಯನ್‌ ದೇಶ. ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಸುಳ್ಳು ಪ್ರತಿಮೆಗೆ ನಾವು ಏಕೆ ಅನುಮತಿಸುತ್ತಿದ್ದೇವೆ?’ ಎಂಬ ಟೆಕ್ಸಾಸ್‌ನ ರಿಪಬ್ಲಿಕನ್‌ ಪಕ್ಷದ ನಾಯಕ ಅಲೆಕ್ಸಾಂಡರ್‌ ಡಂಕನ್ ಅವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಟೆಕ್ಸಾಸ್‌ನಲ್ಲಿ ನಿರ್ಮಿಸಿರುವ 90 ಅಡಿ ಎತ್ತರದ ಹನುಮಾನ್‌ ಪ್ರತಿಮೆಯ ಕುರಿತ ಡಂಕನ್ ಮಾತಿಗೆ ಅಮೆರಿಕದಲ್ಲಿನ ಹಿಂದೂ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಲೆಕ್ಸಾಂಡರ್‌ ಡಂಕನ್, ಹನುಮಾನ್‌ ಪ್ರತಿಮೆಯ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ ಬೈಬಲ್ ಅನ್ನು ಉಲ್ಲೇಖಿಸಿ, ‘ನನ್ನನ್ನು ಹೊರತುಪಡಿಸಿ ನಿಮಗೆ ಬೇರೆ ದೇವರು ಇರಬಾರದು. ನೀವು ನಿಮಗಾಗಿ ಯಾವುದೇ ರೀತಿಯ ವಿಗ್ರಹವನ್ನು ಸ್ವರ್ಗದಲ್ಲಿ, ಭೂಮಿಯಲ್ಲಿ ಅಥವಾ ಸಮುದ್ರದಲ್ಲಿ ಮಾಡಿಕೊಳ್ಳಬಾರದು’ ಎಂದಿರುವುದಾಗಿ ಬರೆದುಕೊಂಡಿದ್ದಾರೆ.

ಅಲೆಕ್ಸಾಂಡರ್‌ ಡಂಕನ್ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿರೋಧ ವ್ಯಕ್ತವಾಗಿದೆ. ‘ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ’ ಹೇಳಿಕೆ ಎಂದು ಅಮೆರಿಕದಲ್ಲಿನ ಹಿಂದೂ ಫೌಂಡೇಶನ್‌ ಆಕ್ರೋಶ ವ್ಯಕ್ತಪಡಿಸಿದೆ. ಹೇಳಿಕೆ ಎಂದಿದೆ. 

ಅಲ್ಲದೆ, ಈ ಕುರಿತು ಹೇಳಿಕೆ ಬಿಡುಗಡೆ ಮಾಡುವಂತೆ ಟ್ರಂಪ್‌ ನಾಯಕತ್ವದ ರಿಪಬ್ಲಿಕನ್‌ ಪಕ್ಷವನ್ನು ಒತ್ತಾಯಿಸಿದೆ. ‘ನಿಮ್ಮ ಪಕ್ಷದ ಸೆನೆಟ್ ಅಭ್ಯರ್ಥಿಯು ಹಿಂದೂ ವಿರೋಧಿ ಮತ್ತು ಪ್ರಚೋದನಾಕಾರಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ನಿಮ್ಮ ನಾಯಕನ ವರ್ತನೆಯನ್ನು ಸರಿಪಡಿಕೊಳ್ಳುವಂತೆ ಸಲಹೆ ನೀಡುವಿರಾ’ ಎಂದು ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.