ADVERTISEMENT

ನೇಪಾಳದಲ್ಲಿ ಭೂಕುಸಿತ: 9 ಮಂದಿ ಸಾವು, 22 ಮಂದಿ ನಾಪತ್ತೆ

ಪಿಟಿಐ
Published 13 ಸೆಪ್ಟೆಂಬರ್ 2020, 10:47 IST
Last Updated 13 ಸೆಪ್ಟೆಂಬರ್ 2020, 10:47 IST
ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು
ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು   

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆಯಿಂದಾಗಿ ಭಾನುವಾರ ಮುಂಜಾನೆ ಭೂ ಕುಸಿತ ಸಂಭವಿಸಿದ್ದು,9 ಮಂದಿ ಮೃತಪಟ್ಟಿದ್ದಾರೆ.

ನೇಪಾಳದ ನಾಗಪುಜೆ, ಬ್ರಿಖಾರ್ಕ, ನೆವಾರ ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ 2.30 ರ ಸುಮಾರಿಗೆ ಭೂ ಕುಸಿತ ಸಂಭವಿಸಿದೆ. ಇದರಲ್ಲಿ 9 ಜನರು ಸಾವನ್ನಪ್ಪಿದ್ದು, 22 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೈರಿಪಬ್ಲಿಕ ವರದಿ ಮಾಡಿದೆ.

‘ಘಟನಾ ಸ್ಥಳದಿಂದ ಏಳು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಗುಂಥಗ ಪ್ರಾಂತ್ಯದಲ್ಲಿ 22 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದುಸಿಂಧುಪಾಲ್ಚೌಕ್‌ಜಿಲ್ಲಾ ಪೊಲೀಸ್ ಕಚೇರಿಯ ಮುಖ್ಯಸ್ಥ ರಾಜನ್‌ ಅಧಿಕಾರಿ ಅವರು ತಿಳಿಸಿದರು.

ADVERTISEMENT

ನೇಪಾಳ ಸೇನೆ, ಪೊಲೀಸ್‌,ಸಶಸ್ತ್ರ ಪೊಲೀಸ್ ಪಡೆಯು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.