ADVERTISEMENT

ಅಧಿಕ ತಾಪಮಾನದಿಂದ ಚೀನಾದಲ್ಲಿ ಬರ

ಏಜೆನ್ಸೀಸ್
Published 16 ಆಗಸ್ಟ್ 2022, 14:11 IST
Last Updated 16 ಆಗಸ್ಟ್ 2022, 14:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಅಧಿಕ ತಾಪಮಾನ ಮತ್ತು ಸುದೀರ್ಘ ಬರದ ಪರಿಣಾಮ ಚೀನಾದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ ಮತ್ತು ಕೃಷಿ ಬೆಳೆಗಳ ಇಳುವರಿ ಗಣನೀಯ ಪ್ರಮಾಣದಲ್ಲಿ ತಗ್ಗಿದೆ.ಕೆಲವು ಗ್ರಾಮಗಳಿಗೆ ಕುಡಿಯಲು ಮತ್ತು ಕೃಷಿ ಬೆಳೆಗಳಿಗೆ ಟ್ರಕ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಹೆಚ್ಚಾಗಿ ಪರ್ವತಗಳು ಮತ್ತು ನದಿಗಳನ್ನು ಒಳಗೊಂಡಿರುವ ನೈಋತ್ಯ ಚೀನಾದ ಚೋಂಗ್‌ಕಿಂಗ್‌ನಲ್ಲಿ ತೀವ್ರ ಮಳೆ ಕೊರತೆ ಕಾಣಿಸಿಕೊಂಡಿದೆ. ಕೆಲ ಸಣ್ಣ ಕಾಲುವೆಗಳು ಈಗಾಗಲೇ ಬತ್ತಿ ಹೋಗಿವೆ. ಪರಿಣಾಮ6 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ, 36,700 ಹೆಕ್ಟೇರ್‌ ಕೃಷಿ ಭೂಮಿಯ ಇಳುವರಿಗೆ ಹಾನಿಯಾಗಿದೆ.

ಚೀನಾದ ಹಲವು ಭಾಗಗಳಲ್ಲಿ ಈಗಾಗಲೇ ದಾಖಲೆ ಪ್ರಮಾಣ ತಾಪಮಾನ ದಾಖಲಾಗಿದ್ದು, ಇದು 40 ಡಿಗ್ರಿ ಸೆಲ್ಸಿಯಸ್‌ಗಿಂತ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಸಂಕಷ್ಟದಲ್ಲಿ ಜರ್ಮನಿಯ ಉದ್ಯಮ ಕ್ಷೇತ್ರ: (ಬರ್ಲಿನ್‌ ವರದಿ): ಯುರೋಪ್‌ನಲ್ಲಿ ಸೃಷ್ಟಿಯಾಗಿರುವ ಬರದಿಂದ ಜರ್ಮನಿಯ ಉದ್ಯಮ ಕ್ಷೇತ್ರ ಸಂಕಷ್ಟಕ್ಕೊಳಗಾಗಿದೆ. ಇಲ್ಲಿನ ರಾಯಿನ್‌ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣದಿಂದ ಸರಕುಗಳ ಸಾಗಣೆ ಕಷ್ಟವಾಗುತ್ತಿದೆ. ಇದು ಮುಂದುವರಿದರೆ ಕೈಗಾರಿಕೆಗಳ ಉತ್ಪಾದನೆ ಕಡಿಮೆಯಾಗಲಿದೆ ಅಥವಾ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ ಎಂದು ಜರ್ಮನಿಯ ಪ್ರಮುಖ ಕೈಗಾರಿಕೆಗಳು ಎಚ್ಚರಿಕೆ ನೀಡಿವೆ.

ಕಳೆದ 24 ತಾಸಿನಲ್ಲಿ ನದಿಯ ನೀರಿನ ಪ್ರಮಾಣ ಮತ್ತೆ 4 ಸೆಂ.ಮೀ.ನಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.