ADVERTISEMENT

ಸಿಎಎ ಬಗ್ಗೆ ತಪ್ಪು ಮಾಹಿತಿ: ಆರೋಪ

ಪಿಟಿಐ
Published 7 ಮಾರ್ಚ್ 2020, 19:36 IST
Last Updated 7 ಮಾರ್ಚ್ 2020, 19:36 IST
   

ವಾಷಿಂಗ್ಟನ್‌: ಅಮೆರಿಕದಅಂತರರಾಷ್ಟ್ರೀಯ ಧಾರ್ಮಿಕಸ್ವಾತಂತ್ರ್ಯ ಕುರಿತಾದ ಆಯೋಗ(ಯುಎಸ್‌ಸಿಐಆರ್‌ಎಫ್‌) ಪೌರತ್ವ (ತಿದ್ದುಪಡಿ) ಕಾಯ್ದೆಯ ಆಶಯ ಹಾಗೂ ಪ್ರಭಾವದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹಿಂದೂ–ಅಮೆರಿಕನ್‌ ಫೌಂಡೇಶನ್‌ ದೂರಿದೆ.

ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವಯುಎಸ್‌ಸಿಐಆರ್‌ಎಫ್‌, ಸಿಎಎ ಮತ್ತು ರೋಹಿಂಗ್ಯಾ ಮುಸ್ಲಿಮರ ಸಮಸ್ಯೆಗಳ ಬಗ್ಗೆ ಅಮೆರಿಕ ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿದೆ.

‘ಸಿಎಎಯಿಂದಾಗಿ ದೇಶದ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ನಿರ್ಲಕ್ಷ್ಯಕ್ಕೆ ಗುರಿಯಾಗಬಹುದೆಂದು’ಯುಎಸ್‌ಸಿಐಆರ್‌ಎಫ್‌ ಈಚೆಗೆ ಕಳವಳ ವ್ಯಕ್ತಪಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.