ADVERTISEMENT

ಕೆನಡಾ: ಹಿಂದೂ ದೇವಸ್ಥಾನದ ಗೋಡೆ ಮೇಲೆ ಖಾಲಿಸ್ತಾನ ಪರ ಬರಹ

ಪಿಟಿಐ
Published 21 ಏಪ್ರಿಲ್ 2025, 10:40 IST
Last Updated 21 ಏಪ್ರಿಲ್ 2025, 10:40 IST
<div class="paragraphs"><p>ವೀಡಿಯೊ ಸ್ಕ್ರೀನ್‌ಗ್ರಾಬ್ </p></div>

ವೀಡಿಯೊ ಸ್ಕ್ರೀನ್‌ಗ್ರಾಬ್

   

(X/@abhishekjha157)

ಟೊರೊಂಟೊ: ಕೆನಡಾದ ಸರ್ರೆಯಲ್ಲಿರುವ ಹಿಂದೂ ದೇವಸ್ಥಾನವೊಂದರ ಗೋಡೆ ಹಾಗೂ ಕಂಬಗಳ ಮೇಲೆ ಖಾಲಿಸ್ತಾನ ಪರ ಬರಹಗಳನ್ನು ಗೀಚಿ, ವಿರೂಪಗೊಳಿಸಲಾಗಿದೆ.  

ADVERTISEMENT

‘ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಏ.19ರಂದು ಬೆಳಗಿನ ಜಾವ 3 ಗಂಟೆಗೆ ಈ ಘಟನೆ ನಡೆದಿದೆ. ದೇವಸ್ಥಾನಕ್ಕೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಖಾಲಿಸ್ತಾನ ಪರ ಬರಹಗಳನ್ನು ಗೀಚಿದ್ದಾರೆ. ಭದ್ರತೆಗಾಗಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾವನ್ನೂ ದೋಚಿದ್ದಾರೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. 

‘ಘಟನೆ ಕುರಿತು ಸರ್ರೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ದ್ವೇಷದ ಈ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಕೇವಲ ಅಪರಾಧವಲ್ಲ. ನೂರಾರು ಕುಟುಂಬಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿರುವ ಪವಿತ್ರ ಸ್ಥಳದ ಮೇಲೆ ನಡೆದ ದಾಳಿಯಾಗಿದೆ’ ಎಂದು ಹೇಳಿದೆ. 

ಈ ಸಂಬಂಧ ಸರ್ರೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆಗೆ ಸಹಕರಿಸುತ್ತಿದ್ದೇವೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.