ADVERTISEMENT

ಹಾಂಗ್‌ಕಾಂಗ್‌ನಲ್ಲಿ ಬೆಂಕಿ: 20 ಸಾವಿರ ಮನೆಗಳಿಗೆ 2 ದಿನಗಳಿಂದ ವಿದ್ಯುತ್ ಕಡಿತ

ಹಾಂಗ್‌ಕಾಂಗ್‌ನಲ್ಲಿ ಉಂಟಾಗಿರುವ ಬೆಂಕಿಯಿಂದ ಸಮಸ್ಯೆ ಸೃಷ್ಟಿ

ರಾಯಿಟರ್ಸ್
Published 22 ಜೂನ್ 2022, 5:27 IST
Last Updated 22 ಜೂನ್ 2022, 5:27 IST
   

ಹಾಂಗ್‌ಕಾಂಗ್: ಜಾಗತಿಕ ವಾಣಿಜ್ಯ ನಗರಿ ಖ್ಯಾತಿಯ ಹಾಂಗ್‌ಕಾಂಗ್‌ನಲ್ಲಿ ಉಂಟಾಗಿರುವ ಅಗ್ನಿ ಅವಘಡದಿಂದಾಗಿ ಭಾರಿ ಸಮಸ್ಯೆ ಸೃಷ್ಟಿಯಾಗಿದೆ.

ಅಗ್ನಿ ಅನಾಹುತದಿಂದಾಗಿ, ಕಳೆದ ಎರಡು ದಿನಗಳಿಂದ 20 ಸಾವಿರ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಿಲ್ಲ. ಅಲ್ಲದೆ, ಬಿಸಿಗಾಳಿ ಮತ್ತು ಹದಗೆಟ್ಟ ವಾತಾವರಣದಿಂದಾಗಿ ಜನರು ಪರದಾಡುವಂತಾಗಿದೆ.

ಹಾಂಗ್‌ಕಾಂಗ್ ನಗರದಲ್ಲಿ ಉಂಟಾದ ಅನಾಹುತ ಕುರಿತಂತೆ ತನಿಖೆಗೆ ಅಲ್ಲಿನ ಸರ್ಕಾರ ಆದೇಶಿಸಿದೆ.

ADVERTISEMENT

ವಿದ್ಯುತ್ ಪೂರೈಕೆದಾರ ಸಿಎಲ್‌ಪಿ ಪವರ್‌ ಸಂಸ್ಥೆಯ ಕೇಬಲ್ ಬ್ರಿಜ್ ಒಂದು ಬೆಂಕಿಗೆ ಆಹುತಿಯಾಗಿದ್ದು, ಇದರಿಂದ 1,60,000 ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ತಡೆ ಉಂಟಾಗಿದೆ.

ಅಗತ್ಯ ಸೇವೆಗಳಿಗೆ, ಆಸ್ಪತ್ರೆ ಮತ್ತು ರೈಲ್ವೆಗೆ ವಿದ್ಯುತ್ ಪೂರೈಕೆ ಸರಿಪಡಿಸಲಾಗಿದೆ. ಆದರೆ ಮನೆಗಳಿಗೆ ವಿದ್ಯುತ್ ಪೂರೈಕೆ ಜಾಲವನ್ನು ಸರಿಪಡಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.