ADVERTISEMENT

ಅಘ್ಗನ್‌ ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದುವಾಗದಿರಲಿ: ಸಿಂಗಪುರ ಪ್ರಧಾನಿ

ಪಿಟಿಐ
Published 23 ಆಗಸ್ಟ್ 2021, 10:58 IST
Last Updated 23 ಆಗಸ್ಟ್ 2021, 10:58 IST
ಲೀ ಶೆನ್‌ ಲಾಂಗ್‌
ಲೀ ಶೆನ್‌ ಲಾಂಗ್‌   

ಸಿಂಗಪುರ: ‘ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಘ್ಗಾನಿಸ್ತಾನವು ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದು ಆಗದಿರಲಿ’ ಎಂದು ಸಿಂಗಪುರ ಪ್ರಧಾನಿ ಲೀ ಶೆನ್‌ ಲಾಂಗ್‌ ಅವರು ಆಶಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋಮವಾರ ಸಿಂಗಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೀ ಶೆನ್ ಅವರು, ‘20 ವರ್ಷಗಳ ಹಿಂದೆ ಅಮೆರಿಕದ ಮಧ್ಯೆ ಪ್ರವೇಶದಿಂದಾಗಿ, ಭಯೋತ್ಪಾದನಾ ಸಂಘಟನೆಗಳು ಅಘ್ಗಾನಿಸ್ತಾನವನ್ನು ತಮ್ಮ ಸುರಕ್ಷತಾ ನೆಲೆಯಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿದ್ದವು. ಮುಂಬರುವ ದಿನಗಳಲ್ಲೂ ಅಘ್ಗಾನಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದುವಾಗುವುದಿಲ್ಲ ಎಂದು ಸಿಂಗಪುರ ಭಾವಿಸುತ್ತದೆ’ ಎಂದು ಹೇಳಿದರು.

ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದ ಭಾಗವಾಗಿ ಸಿಂಗಪುರವು ಅಘ್ಗಾನಿಸ್ತಾನಕ್ಕೆ ತನ್ನ ಸೇನಾ ಸಿಬ್ಬಂದಿಯನ್ನು ಕಳುಹಿಸಿದೆ. ಎರಡು ದಶಕಗಳ ಬಳಿಕ ಅಮೆರಿಕವು ಅಘ್ಗಾನಿಸ್ತಾನದಿಂದ ತನ್ನ ಸೇನಾಪಡೆಯನ್ನು ಹಿಂತೆಗೆದುಕೊಂಡಿದೆ. ನಂತರದ ಬೆಳವಣಿಗೆಯಲ್ಲಿ ತಾಲಿಬಾನ್, ಅಘ್ಗಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.