ADVERTISEMENT

ಹಮಾಸ್‌ ಬಂಡುಕೋರರ ಹಿಂಸಾಚಾರ: ಮಾನವೀಯ ಕಾರಿಡಾರ್‌ ನಿರ್ಮಿಸಲು ಡಬ್ಲುಎಚ್‌ಒ ಕರೆ

​ಪ್ರಜಾವಾಣಿ ವಾರ್ತೆ
ಎಎಫ್‌ಪಿ
Published 10 ಅಕ್ಟೋಬರ್ 2023, 16:07 IST
Last Updated 10 ಅಕ್ಟೋಬರ್ 2023, 16:07 IST
<div class="paragraphs"><p>ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಹಮಾಸ್ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವೆ ಸಂಘರ್ಷ ಮುಂದುವರಿದಿದ್ದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ.</p></div>

ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಹಮಾಸ್ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವೆ ಸಂಘರ್ಷ ಮುಂದುವರಿದಿದ್ದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ.

   

ರಾಯಿಟರ್ಸ್‌ ಚಿತ್ರ

ಜಿನೀವಾ: ಇಸ್ರೇಲ್‌ ಸೇನೆ ಮತ್ತು ಹಮಾಸ್‌ ಬಂಡುಕೋರರು ನಡೆಸುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸಲು ಕರೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ), ಅಗತ್ಯ ವೈದ್ಯಕೀಯ ನೆರವು ರವಾನಿಸಲು ಗಾಜಾ ಪಟ್ಟಿಯ ಒಳಗೆ ಮತ್ತು ಹೊರಗೆ ಮಾನವೀಯ ಕಾರಿಡಾರ್‌ ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಿದೆ.

ADVERTISEMENT

ಈಗಾಗಲೇ ಗಾಜಾ ಪಟ್ಟಿಗೆ ನೀರು, ಆಹಾರ, ವಿದ್ಯುತ್‌ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಯನ್ನು ಇಸ್ರೇಲ್‌ ನಿಲ್ಲಿಸಿದೆ. ಡಬ್ಲುಎಚ್‌ಒ ಪೂರೈಕೆ ಮಾಡಿದ್ದ ಅಗತ್ಯ ವಸ್ತುಗಳು, ಔಷಧಗಳ ದಾಸ್ತಾನು ಕೂಡಾ ಮುಗಿಯುತ್ತಾ ಬಂದಿದೆ. ಆ ಭೂಪ್ರದೇಶದ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಔಷಧಗಳ ಅಗತ್ಯವಿದೆ. ಆರೋಗ್ಯ ಸೌಕರ್ಯಗಳನ್ನು ಕಾಪಾಡಬೇಕು ಎಂದು ಡಬ್ಲುಎಚ್‌ಒ ಹೇಳಿದೆ.

‘ಅಗತ್ಯ ವೈದ್ಯಕೀಯ ನೆರವು ನೀಡುವ ದಿಸೆಯಲ್ಲಿ ಮಾನವೀಯ ಕಾರಿಡಾರ್‌ ಅಗತ್ಯವಿದೆ. ಇಂಧನ, ವಿದ್ಯುತ್‌ ಇಲ್ಲದೇ ಆಸ್ಪತ್ರೆಗಳನ್ನು ನಡೆಸಲು ಸಾಧ್ಯವಿಲ್ಲ’ ಎಂದು ಡಬ್ಲುಎಚ್‌ಒ ವಕ್ತಾರ ತಾರಿಕ್‌ ಜಾಸರೆವಿಕ್‌ ಜಿನೀವಾದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗಾಜಾ ಪಟ್ಟಿಯ ವೈದ್ಯಕೀಯ ವ್ಯವಸ್ಥೆಗಳ ಮೇಲೆ 13 ದಾಳಿಗಳು ನಡೆದಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.