ADVERTISEMENT

ಚೀನಾ: ಭಾರಿ ಪ್ರವಾಹ, 12ಕ್ಕೂ ಹೆಚ್ಚು ಮಂದಿ ಸಾವು

ಲಕ್ಷಾಂತರ ಮಂದಿಯನ್ನು ಮನೆಗಳಿಂದ ತೆರವುಗೊಳಿಸಿದ ಸರ್ಕಾರ

ಏಜೆನ್ಸೀಸ್
Published 10 ಜೂನ್ 2020, 11:11 IST
Last Updated 10 ಜೂನ್ 2020, 11:11 IST
ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯ ಕಿಂಗ್‌ಯುವಾನ್‌ನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಹಳ್ಳಿಯ ಜನರನ್ನು ಸ್ಥಳಾಂತಿರುವ ಸಂದರ್ಭದಲ್ಲಿ ಮಗುವೊಂದನ್ನು ರಕ್ಷಣಾ ಪಡೆಯ ಸಿಬ್ಬಂದಿ ರಕ್ಷಿಸಿದರು –ಎಪಿ, ಪಿಟಿಐ ಚಿತ್ರ 
ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯ ಕಿಂಗ್‌ಯುವಾನ್‌ನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಹಳ್ಳಿಯ ಜನರನ್ನು ಸ್ಥಳಾಂತಿರುವ ಸಂದರ್ಭದಲ್ಲಿ ಮಗುವೊಂದನ್ನು ರಕ್ಷಣಾ ಪಡೆಯ ಸಿಬ್ಬಂದಿ ರಕ್ಷಿಸಿದರು –ಎಪಿ, ಪಿಟಿಐ ಚಿತ್ರ    

ಬೀಜಿಂಗ್: ದಕ್ಷಿಣ ಮತ್ತು ಮಧ್ಯ ಚೀನಾದಲ್ಲಿ ಭಾರಿ ಪ್ರವಾಹದಿಂದಾಗಿ 12ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಲಕ್ಷಾಂತರ ಮಂದಿಯನ್ನು ಮನೆಗಳಿಂದ ತೆರವುಗೊಳಿಸಲಾಗಿದೆ ಎಂದು ಚೀನಾ ಸರ್ಕಾರ ಬುಧವಾರ ತಿಳಿಸಿದೆ.

ಚೀನಾದಲ್ಲಿ ಜೂನ್ 2ರಿಂದ ಪ್ರವಾಹ ಉಂಟಾಗಿದ್ದು, ಸುಮಾರು 2.28ಲಕ್ಷ ಮಂದಿ ತುರ್ತು ಆಶ್ರಯ ಪಡೆದಿದ್ದಾರೆ ಎಂದು ತುರ್ತು ನಿರ್ವಹಣಾ ಸಚಿವಾಲಯ ಮಾಹಿತಿ ನೀಡಿದೆ.

ಪ್ರವಾಹದಿಂದಾಗಿ ಆರಂಭಿಕ ಹಂತದಲ್ಲಿ ₹ 36 ಶತಕೋಟಿಗಿಂತಲೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ಮನೆಗಳು ಹಾನಿಗೀಡಾಗಿವೆ.

ADVERTISEMENT

ಗುವಾಂಗ್ಸಿಯ ದಕ್ಷಿಣ ಪ್ರಾಂತ್ಯದಲ್ಲಿ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಈ ಪ್ರದೇಶದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ಚೀನಾದ ಉತ್ತರ ಭಾಗದ ಹುನನ್ ಪ್ರಾಂತ್ಯದಲ್ಲಿ ಏಳು ಮಂದಿ ಸಾವಿಗೀಡಾಗಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ.

ಚೀನಾದ ಯಾಂಗ್ಟ್ಜೆ ಮತ್ತು ಪರ್ಲ್ ನದಿಗಳ ದಕ್ಷಿಣ ಭಾಗಗಳಲ್ಲಿ ಪ್ರತಿವರ್ಷ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗುತ್ತಿದೆ. ಚೀನಾದಲ್ಲಿ 2008ರಲ್ಲಿ ಉಂಟಾದ ಭಾರಿ ಪ್ರವಾಹದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಸುಮಾರು 30 ಲಕ್ಷಕ್ಕೂ ಹೆಚ್ಚಿನ ಮನೆಗಳು ಹಾನಿಗೀಡಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.