ADVERTISEMENT

ರಷ್ಯಾ–ಉಕ್ರೇನ್‌ ಸಮರ: ಪುಟಿನ್‌ ವಿರುದ್ಧ ಐಸಿಸಿಯಿಂದ ಬಂಧನ ವಾರಂಟ್‌

ಏಜೆನ್ಸೀಸ್
Published 17 ಮಾರ್ಚ್ 2023, 16:02 IST
Last Updated 17 ಮಾರ್ಚ್ 2023, 16:02 IST
   

ಹೇಗ್‌: ಉಕ್ರೇನ್‌ನ ಮಕ್ಕಳ ಅಪಹರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಯುದ್ಧ ಅಪರಾಧಗಳಿಗಾಗಿ ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವುದಾಗಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ(ಐಸಿಸಿ) ಶುಕ್ರವಾರ ತಿಳಿಸಿದೆ.

‘ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡುವ ಯುದ್ಧ ಅಪರಾಧ ಮತ್ತು ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ ಕಾನೂನುಬಾಹಿರವಾಗಿ ಉಕ್ರೇನ್‌ನ ಮಕ್ಕಳನ್ನು ಸಾಗಿಸುವ ಯುದ್ಧ ಅಪರಾಧಕ್ಕೆ ಪುಟಿನ್ ಜವಾಬ್ದಾರರಾಗಿದ್ದಾರೆ’ ಎಂದು ನ್ಯಾಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನು ಇದೇ ಆರೋಪದಡಿ ಬಂಧಿಸಲು ಶುಕ್ರವಾರ ವಾರಂಟ್ ಹೊರಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.