ADVERTISEMENT

ಬಾಂಗ್ಲಾದೇಶ | ಮೂರು ಹಿಂದೂ ದೇವಾಲಯಗಳ ಎಂಟು ವಿಗ್ರಹಗಳು ಧ್ವಂಸ

ಪಿಟಿಐ
Published 21 ಡಿಸೆಂಬರ್ 2024, 7:04 IST
Last Updated 21 ಡಿಸೆಂಬರ್ 2024, 7:04 IST
   

ಢಾಕಾ: ಬಾಂಗ್ಲಾದೇಶದ ಮೈಮನ್‌ಸಿಂಗ್ ಮತ್ತು ದಿನಾಜಪುರದಲ್ಲಿ ಕೆಲವು ದುಷ್ಕರ್ಮಿಗಳು ಮೂರು ಹಿಂದೂ ದೇವಾಲಯಗಳ ಎಂಟು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.

ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ‘ಡೈಲಿ ಸ್ಟಾರ್ ಪತ್ರಿಕೆ’ ವರದಿ ಮಾಡಿದೆ.

ಮೈಮನ್‌ಸಿಂಗ್‌ನ ಹಲುವಾ ಘಾಟ್‌ನಲ್ಲಿ ಗುರುವಾರ ಮತ್ತು ಶುಕ್ರವಾರದಂದು ಕೆಲವು ದುಷ್ಕರ್ಮಿಗಳು ಎರಡು ದೇವಾಲಯಗಳ ಮೂರು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಹಲುವಾ ಘಾಟ್ ಪೊಲೀಸ್ ಠಾಣೆಯ ಅಧಿಕಾರಿ ಅಬುಲ್ ಖಯೇರ್ ತಿಳಿಸಿದ್ದಾರೆ.

ADVERTISEMENT

ಮತ್ತೊಂದು ಘಟನೆಯಲ್ಲಿ, ಗುರುವಾರ ಮುಂಜಾನೆ ಹಲುವಾ ಘಾಟ್‌ನ ಬೀಳ್ದೋರ ಯೂನಿಯನ್‌ನಲ್ಲಿರುವ ಪೊಲಾಷ್ಕಂಡ ಕಾಳಿ ದೇವಸ್ಥಾನದಲ್ಲಿ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ 27 ವರ್ಷದ ಅಲಾಲ್‌ ಉದ್ದೀನ್‌ ಎಂಬ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಖಯೇರ್‌ ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.