ADVERTISEMENT

ಅಮೆರಿಕದ ಆರ್ಥಿಕತೆ ಹಾಳುಮಾಡಿದ ಬೈಡೆನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ

ಪಿಟಿಐ
Published 22 ಸೆಪ್ಟೆಂಬರ್ 2020, 6:03 IST
Last Updated 22 ಸೆಪ್ಟೆಂಬರ್ 2020, 6:03 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ’ತನ್ನ ಐದು ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಆರ್ಥಿಕತೆಯನ್ನು ಅಮೆರಿಕದ ಮಾಜಿ ಉಪಾಧ್ಯಕ್ಷ ಜೊ ಬೈಡನ್ತೀರಾ ಹದಗೆಡಿಸಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

’ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಜಯಗಳಿಸಿದರು, ಅದು ಚೀನಾದ ಗೆಲುವಾಗಲಿದೆ’ ಎಂದು ಟ್ರಂಪ್‌ ಟೀಕಿಸಿದ್ದಾರೆ.

ಮಂಗಳವಾರ ಒಹಾಯೊದ ಡೇಟನ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ’ನಿಮಗೆ ಗೊತ್ತಿದೆಯೇ, ಜೊ ಬೈಡನ್ 47 ವರ್ಷಗಳಿಂದ ನಿಮ್ಮ ಉದ್ಯೋಗಗಳನ್ನು ಚೀನಾ ಮತ್ತು ವಿದೇಶಗಳಿಗೆ ರವಾನಿಸುತ್ತಿದ್ದಾರೆ. ಆದರೆ, ನಾನು ನಾಲ್ಕು ವರ್ಷಗಳಿಂದ ಆ ಉದ್ಯೋಗಗಳನ್ನು ನಮ್ಮ ದೇಶಕ್ಕೆ ಮರಳಿ ಕರೆತರುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

’‌ನವೆಂಬರ್ 3 ರಂದು ನಡೆಯುವ ಚುನಾವಣೆ ಬಹಳ ಮಹತ್ವದ್ದಾಗಿದೆ' ಎಂದು ಬಣ್ಣಿಸಿದ ಟ್ರಂಪ್‌,ಆ ದಿನ ಮತದಾರರು ನಮ್ಮ ದೇಶವನ್ನು ಉನ್ನತ ಸ್ಥಾನಕ್ಕೆ ಏರಿಸುತ್ತಾರೋ ಅಥವಾ ನಮ್ಮ ಆರ್ಥಿಕತೆ ಕುಸಿತ ಕಾಣವುದ್ದಾಗಿ, ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುವುದಕ್ಕಾಗಿ ಜೊ ಬೈಡನ್‌ಗೆ ಅವಕಾಶ ಮಾಡಿಕೊಡುತ್ತಾರೋ ಎಂಬುದು ನಿರ್ಧಾರವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.