ADVERTISEMENT

ಪ್ಯಾರಾಸಿಟಾಮೊಲ್‌ ಅನ್ನು ಆಟಿಸಂಗೆ ತಳುಕು ಹಾಕಿದ ಟ್ರಂಪ್‌

ಪಿಟಿಐ
Published 23 ಸೆಪ್ಟೆಂಬರ್ 2025, 14:48 IST
Last Updated 23 ಸೆಪ್ಟೆಂಬರ್ 2025, 14:48 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಗರ್ಭಿಣಿಯರು ಟೈಲೆನಾಲ್‌ (ಪ್ಯಾರಾಸಿಟಾಮೊಲ್‌) ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಶ್ವೇತಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವದಂತಿಯೊಂದಿದೆ... ಅದು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಕ್ಯುಬಾದಲ್ಲಿ ಟೈಲೆನಾಲ್‌ (ಪ್ಯಾರಾಸಿಟಾಮೊಲ್‌) ಇಲ್ಲ. ಏಕೆಂದರೆ ಅದನ್ನು ಖರೀದಿಸುವಷ್ಟು ಹಣ ಇಲ್ಲ. ಕಾಕತಾಳೀಯ ಎಂಬಂತೆ ಅಲ್ಲಿ ಆಟಿಸಂ ಕಾಯಿಲೆ ಸಹ ಇಲ್ಲ’ ಎಂದು ಹೇಳಿದ್ದಾರೆ.

ತಾಯಂದಿರು ತಮ್ಮ ಮಕ್ಕಳಿಗೆ ನೋವು ನಿವಾರಕವಾಗಿ ಟೈಲೆನಾಲ್‌ ನೀಡದಂತೆ ಸಲಹೆ ನೀಡಿದ್ದಾರೆ.

ADVERTISEMENT

ಟ್ರಂಪ್‌ ಹೇಳಿಕೆಗೆ ವೈದ್ಯಕೀಯ ಕ್ಷೇತ್ರದ ತಜ್ಞರು ಟೀಕೆ ವ್ಯಕ್ತಪಡಿಸಿದ್ದಾರೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ತನ್ನೊಳಗೇ ಲೀನವಾಗಿರುವ, ಸಾಮಾಜಿಕವಾಗಿ ಬೆರೆಯಲಿಚ್ಛಿಸದ, ಮಾತು ಬಾರದ ಅಥವಾ ಬಂದರೂ ಇತರರೊಂದಿಗೆ ಸಂವಹಿಸಲು ಕಷ್ಟಪಡುವ ಮಿದುಳು ಹಾಗೂ ನರಕ್ಕೆ ಸಂಬಂಧಿಸಿದ ಕಾಯಿಲೆಯೇ ಆಟಿಸಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.