ADVERTISEMENT

ಅಮೆರಿಕ: ಅರ್ಹತೆ ಆಧಾರಿತ ವಲಸೆ ಪ್ರಮಾಣ ಹೆಚ್ಚಳಕ್ಕೆ ಚಿಂತನೆ

ಪಿಟಿಐ
Published 17 ಜುಲೈ 2019, 19:06 IST
Last Updated 17 ಜುಲೈ 2019, 19:06 IST
   

ವಾಷಿಂಗ್ಟನ್‌ : ಅರ್ಹತೆ ಆಧಾರಿತ ಕಾನೂನುಬದ್ಧ ವಲಸೆ ಪ್ರಮಾಣವನ್ನು ಶೇ 57ಕ್ಕೆ ಹೆಚ್ಚಿಸಲುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಗಂಭೀರ ಚಿಂತನೆ ನಡೆಸಿದೆ.

ಇದರಲ್ಲಿ ಅರ್ಧದಷ್ಟು ಪ್ರಮಾಣವನ್ನು ಕುಟುಂಬದವರಿಗೆ ಮತ್ತು ಮಾನವೀಯತೆ ಆಧಾರದ ಮೇಲೆ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ.

‘ಕಾನೂನುಬದ್ಧವಾಗಿ ವಲಸೆ ಪ್ರಮಾಣ ಹೆಚ್ಚಿಸುವುದರಿಂದ ಲಕ್ಷಾಂತರ ಪ್ರತಿಭಾವಂತರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಅಲ್ಲದೆ10 ವರ್ಷಗಳ ಅವಧಿಯಲ್ಲಿ ತೆರಿಗೆ ರೂಪದಲ್ಲಿ 34 ಲಕ್ಷ ಕೋಟಿ ಆದಾಯ ಬರಲಿದೆ’ ಎಂದುಟ್ರಂಪ್ ಅವರ ಹಿರಿಯ ಸಲಹೆಗಾರ ಜರೇಡ್ ಕುಶ್ನರ್ ತಿಳಿಸಿದ್ದಾರೆ.

ADVERTISEMENT

ಬೇರೆ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಅಮೆರಿಕದ ವಲಸೆ ನೀತಿ ಬಹಳ ಹಳೆಯ ಸ್ವರೂಪದ್ದಾಗಿದೆ. ಪ್ರಸ್ತುತ ಶೇ 12ರಷ್ಟು ಜನರು ಮಾತ್ರವೇ ಅರ್ಹತೆ ಆಧಾರಿತ ಕಾನೂನುಬದ್ಧ ವಲಸೆ ಪ್ರಮಾಣವನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೆನಡಾ ಶೇ 53, ನ್ಯೂಜಿಲೆಂಡ್‌ ಶೇ 59, ಆಸ್ಟ್ರೇಲಿಯಾ ಶೇ 63, ಜಪಾನ್‌ ಶೇ 52ರಷ್ಟು ಪ್ರಮಾಣದ ಅರ್ಹತೆ ಆಧಾರಿತ ವಲಸೆ ವ್ಯವಸ್ಥೆ ಹೊಂದಿವೆ ಎಂದು ಹೇಳಿದ್ದಾರೆ.

ಟ್ರಂಪ್‌ ನಿರ್ದೇಶನದ ಮೇರೆಗೆ ಕುಶ್ನರ್‌ ವಲಸೆ ಯೋಜನೆಯನ್ನು ಸುಧಾರಣೆ ಮಾಡುತ್ತಿದ್ದಾರೆ. ಈ ಯೋಜನೆ ಅಂತಿಮ ಹಂತ
ದಲ್ಲಿದ್ದು, ಶೀಘ್ರವೇ ಬಹಿರಂಗಗೊಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.