ADVERTISEMENT

ಬಂಧನ ಸಾಧ್ಯತೆ: ಪ್ರತಿಭಟನೆಗೆ ಕರೆ ನೀಡಿದ ಪದಚ್ಯುತ ದಕ್ಷಿಣ ಕೊರಿಯಾ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 14:03 IST
Last Updated 2 ಜನವರಿ 2025, 14:03 IST
ಯೂನ್ ಸುಕ್ ಯೋಲ್ 
ಯೂನ್ ಸುಕ್ ಯೋಲ್    

ಸೋಲ್‌, ದಕ್ಷಿಣ ಕೊರಿಯಾ: ಪದಚ್ಯುತಗೊಂಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್‌ ಪಕ್ಷದ ಬೆಂಬಲಿಗರು ಅವರ ಖಾಸಗಿ ನಿವಾಸದ ಮುಂದೆ ಬೃಹತ್ ರ‍್ಯಾಲಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಸರ್ಕಾರಿ ವಿರೋಧಿ ಪಡೆಗಳ ವಿರುದ್ಧ ಕೊನೆಯವರೆಗೂ ಹೋರಾಡಿ’ ಎಂದು ಕರೆ ನೀಡಿದರು.

ವಿಚಾರಣೆಗೆ ಹಾಜರಾಗುವಂತೆ ಹಲವು ಸಲ ಸೂಚನೆ ನೀಡಿದ್ದರೂ ನಿರಾಕರಿಸಿದ್ದರಿಂದ, ಯೂನ್ ಸುಕ್ ಯೋಲ್ ವಿರುದ್ಧ ಇಲ್ಲಿನ ನ್ಯಾಯಾಲಯವು ಡಿ.31ರಂದು ಬಂಧನ ವಾರಂಟ್ ಹೊರಡಿಸಿತ್ತು. ಈ ವಾರಂಟ್‌ ಒಂದು ವಾರ ಮಾನ್ಯತೆ ಹೊಂದಿದೆ. ಉನ್ನತ ಮಟ್ಟದ ಅಧಿಕಾರಿಗಳು ನ್ಯಾಯಾಲಯದ ಆದೇಶ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ಪೊಲೀಸರು ಯಾವುದೇ ಸಂದರ್ಭದಲ್ಲಿಯೂ ಯೋಲ್‌ ಅವರನ್ನು ವಶಕ್ಕೆ ಪ‍ಡೆಯುವ ಸಾಧ್ಯತೆಯಿದೆ. 

‘ಯೂನ್ ಸುಕ್ ಯೋಲ್ ಅವರನ್ನು ವಶಕ್ಕೆ ಪಡೆಯಲು ಭದ್ರತಾ ಪಡೆ ತಡೆಯೊಡ್ಡಿದರೆ, ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗುವುದು’ ಎಂದು ಭ್ರಷ್ಟಾಚಾರ ನಿಗ್ರಹ ಪಡೆಯ ಮುಖ್ಯ ಪ್ರಾಸಿಕ್ಯೂಟರ್‌ ಒಹ್‌–ಡಾಂಗ್‌–ವೂನ್‌ ತಿಳಿಸಿದ್ದಾರೆ. ಆದರೆ, ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ಕುರಿತು ಇನ್ನೂ ಕೂಡ ಖಚಿತಪಟ್ಟಿಲ್ಲ.

ADVERTISEMENT

ಸಕ್ರಿಯ ಅಪರಾಧ ಎಸಗಿದ ಸಂದರ್ಭದಲ್ಲಿಯೂ ಬಂಧನ, ವಶಕ್ಕೆ ಪಡೆಯುವುದರ ವಿರುದ್ಧ ಹೋರಾಟ ನಡೆಸಲು ದಕ್ಷಿಣ ಕೊರಿಯಾದ ಕಾನೂನಿನಲ್ಲಿ ಅವಕಾಶ ಇದೆ. ಇದೇ ಕಾರಣದಿಂದ, ತಮ್ಮನ್ನು ವಶಕ್ಕೆ ಪಡೆಯುವುದರ ವಿರುದ್ಧ ಬೆಂಬಲಿಗರನ್ನು ಯೂನ್‌ ಅವರು ಎತ್ತಿ ಕಟ್ಟುತ್ತಿದ್ದಾರೆ ಎಂದು ಅವರ ವಿರೋಧಿಗಳು ಆರೋಪಿಸಿದ್ದಾರೆ.

ಮಿಲಿಟರಿ ಆಡಳಿತ ಜಾರಿಗೊಳಿಸಿದ ಯೂನ್ ಸುಕ್ ಯೋಲ್ ಅವರನ್ನು ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.