ADVERTISEMENT

ವಾಗ್ದಂಡನೆ: ವಿಪಕ್ಷಗಳ ನಿರ್ಲಜ್ಜ ಪ್ರಯತ್ನ ಎಂದ ಶ್ವೇತಭವನ

ಅಧಿಕಾರ ದುರ್ಬಳಕೆ ಮಾಡಿಕೊಂಡ ಡೆಮಾಕ್ರಟಿಕ್‌ ಪಕ್ಷ: ಟ್ರಂಪ್‌

ಪಿಟಿಐ
Published 6 ಡಿಸೆಂಬರ್ 2019, 19:46 IST
Last Updated 6 ಡಿಸೆಂಬರ್ 2019, 19:46 IST
ಡೊನಾಲ್ಡ್‌ ಟ್ರಂಪ್‌ 
ಡೊನಾಲ್ಡ್‌ ಟ್ರಂಪ್‌    

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ವಾಗ್ದಂಡನೆ ನಿರ್ಣಯವು ಚುನಾವಣಾ ಫಲಿತಾಂಶವನ್ನು ತಿರುಚಲು ವಿಪಕ್ಷವಾದ ಡೆಮಾಕ್ರಟಿಕ್‌ ಪಕ್ಷ ನಡೆಸುತ್ತಿರುವ ನಿರ್ಲಜ್ಜ ಪ್ರಯತ್ನ ಎಂದು ಶ್ವೇತಭವನ ಹೇಳಿದೆ.

‘ಟ್ರಂಪ್‌ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ ಸಂಸತ್‌ ಸಭಾಧ್ಯಕ್ಷೆ ನ್ಯಾನ್ಸಿ ಪೆಲೊಸಿ, ‘ವಾಗ್ದಂಡನೆ ಪ್ರಕ್ರಿಯೆ ಮುಂದುವರಿಸುವುದನ್ನು ಬಿಟ್ಟು ಅನ್ಯಮಾರ್ಗವಿಲ್ಲ’ ಎಂದು ಗುರುವಾರ ಹೇಳಿದ್ದರು.

ವಾಗ್ದಂಡನೆ ಮೊಕದ್ದಮೆ ‘ಕಪಟ’ವಾಗಿದೆ. ಟ್ರಂಪ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ. ಹೀಗಾಗಿ ವಾಗ್ದಂಡನೆ ಮಂಡಿಸಲೇಬೇಕು ಎಂದು ಡೆಮಾಕ್ರಟಿಕ್ ಪಕ್ಷದವರೇ ಹೇಳುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಡೆಮಾಕ್ರಟಿಕ್‌ ಪಕ್ಷದವರೇ ಸುಳ್ಳು ಹೇಳುತ್ತಿದ್ದಾರೆ, ಕಾನೂನನ್ನೇ ಅಪಹಾಸ್ಯ ಮಾಡುತ್ತಿದ್ದಾರೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸ್ಟೆಫಿನಿ ಗ್ರಿಶಮ್‌ ಹೇಳಿದರು.

ADVERTISEMENT

ಆರೋಪವೇನು?:ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, 2020ರ ಅಧ್ಯಕ್ಷೀಯ ಚುನಾವಣೆಯ ಪ್ರತಿಸ್ಪರ್ಧಿ ಡೆಮಾಕ್ರಟಿಕ್‌ ಪಕ್ಷದಜೋ ಬಿಡನ್‌ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್‌ನ ಅಧ್ಯಕ್ಷ ವಾಲ್ಡಿಮರ್‌ ಜೆಲೆನ್ಸ್‌ಕಿ ಅವರ ಮೇಲೆ ಒತ್ತಡ ತಂದಿದ್ದರು ಎನ್ನುವ ಆರೋಪಟ್ರಂಪ್‌ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.