ADVERTISEMENT

ಪಾಕಿಸ್ತಾನ ಸೇನೆಗೆ ಅಧಿಕಾರ ಕೊಟ್ಟ ಇಮ್ರಾನ್‌

ಪಿಟಿಐ
Published 21 ಫೆಬ್ರುವರಿ 2019, 19:57 IST
Last Updated 21 ಫೆಬ್ರುವರಿ 2019, 19:57 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್‌: ಪುಲ್ವಾಮಾ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಪ‍್ರಕ್ಷುಬ್ಧಗೊಂಡಿದೆ. ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಅಧಿಕಾರವನ್ನು ಭಾರತದ ಪ್ರಧಾನಿ ಮೋದಿ ಸೇನೆಗೆ ಕೊಟ್ಟಿದ್ದಾರೆ. ಅದರ ಬೆನ್ನಿಗೇ, ಭಾರತ ಯಾವುದೇ ‘ದುಸ್ಸಾಹಸ’ಕ್ಕೆ ಕೈಹಾಕಿದರೆ ತಕ್ಕ ಉತ್ತರ ಕೊಡುವಂತೆ ಪಾಕಿಸ್ತಾನ ಸೇನೆಗೆ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಅಧಿಕಾರ ಕೊಟ್ಟಿದ್ದಾರೆ.

ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಮ್ರಾನ್‌ ಅವರು, ತನ್ನ ಜನರನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದನ್ನು ತೋರಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ಪಾಕಿಸ್ತಾನದ ಸರ್ಕಾರ ಮತ್ತು ಸೇನೆಯ ಹಿರಿಯ ಮುಖಂಡರು ಸಭೆಯಲ್ಲಿದ್ದರು. ಪುಲ್ವಾಮಾ ದಾಳಿ ಬಳಿಕದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆದಿದೆ.

ಹಫೀಜ್ ಸಂಘಟನೆ ನಿಷೇಧ: ಮುಂಬೈನಲ್ಲಿ 2008ರಲ್ಲಿ ನಡೆದ ದಾಳಿಯ ರೂವಾರಿ ಹಫೀಜ್‌ ಸಯೀದ್‌ನ ಜಮಾತ್‌ –ಉದ್‌ –ದವಾ (ಜೆಯುಡಿ) ಹಾಗೂ ಫಲಾಹ್ ಇ ಇನ್ಸ್ಯಾನಿಟ್ ಫೌಂಡೇಷನ್ ಸಂಘಟನೆಗಳನ್ನು ಪಾಕಿಸ್ತಾನ ನಿಷೇಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.