ADVERTISEMENT

ಪಾಕ್‌: ‘ಅಸೀಮ್ ಕಾಯ್ದೆ’ ವಿರುದ್ಧ ಬೀದಿಗಿಳಿಯಲು ಇಮ್ರಾನ್‌ ಕರೆ

Imran Khan directs KPK CM Afridi to prepare for street movement against 'Asim Law'

ಪಿಟಿಐ
Published 23 ಡಿಸೆಂಬರ್ 2025, 16:15 IST
Last Updated 23 ಡಿಸೆಂಬರ್ 2025, 16:15 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಲಾಹೋರ್‌: ಪಾಕಿಸ್ತಾನ ರಕ್ಷಣಾ ಪಡೆಗಳ ಮುಖ್ಯಸ್ಥ ಅಸೀಮ್‌ ಮುನೀರ್‌ ಅವರ ‘ಏಕಪಕ್ಷೀಯ ನೀತಿ’ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವಂತೆ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಈ ಸಂಬಂಧ ಸಿದ್ಧತೆ ನಡೆಸುವಂತೆ ತಮ್ಮ ಪಾಕಿಸ್ತಾನ–ಐ–ಇನ್ಸಾಫ್‌(ಪಿಟಿಐ) ಪಕ್ಷದ ನಾಯಕ ಹಾಗೂ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಸೊಹಾಲಿ ಅಫ್ರಿದಿ ಅವರಿಗೆ ಖಾನ್‌ ಸೂಚಿಸಿದ್ದಾರೆ.

‘ಪಾಕಿಸ್ತಾನದಲ್ಲಿ ಈಗ ಎಲ್ಲವೂ ‘ಅಸೀಮ್ ಕಾನೂನು’ ಅಡಿ ನಡೆಯುತ್ತಿದೆ. ದೇಶದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಪಾಕಿಸ್ತಾನದ ನಿಜವಾದ ಸ್ವಾತಂತ್ರ್ಯಕ್ಕಾಗಿ ನಾನು ನನ್ನ ಜೀವವನ್ನು ಸಮರ್ಪಿಸಲು ಸಿದ್ಧನಿದ್ದೇನೆ. ಹೀಗಾಗಿ ಚಳವಳಿಗೆ ಸಿದ್ಧತೆ ನಡೆಸುವಂತೆ ಅಫ್ರಿದಿಗೆ ಕರೆ ನೀಡುತ್ತಿದ್ದೇನೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.