ADVERTISEMENT

ಭಾರತ ದಾಳಿ ಆತಂಕ: ಜೈಲಿನಲ್ಲಿರುವ ಮಾಜಿ PM ಇಮ್ರಾನ್‌ ಬಿಡುಗಡೆಗೆ ಪಕ್ಷದಿಂದ ಅರ್ಜಿ

ಪಿಟಿಐ
Published 9 ಮೇ 2025, 7:53 IST
Last Updated 9 ಮೇ 2025, 7:53 IST
<div class="paragraphs"><p>ಇಮ್ರಾನ್‌ ಖಾನ್</p></div>

ಇಮ್ರಾನ್‌ ಖಾನ್

   

ರಾಯಿಟರ್ಸ್‌ ಚಿತ್ರ

ಇಸ್ಲಾಮಾಬಾದ್: ಭಾರತ ಡ್ರೋನ್ ದಾಳಿ ನಡೆಸುವ ಆತಂಕವಿರುವ ಕಾರಣ ಜೈಲಿನಲ್ಲಿರುವ ಮಾಜಿ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪಾಕಿಸ್ತಾನ್‌ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ADVERTISEMENT

ಖೈಬರ್ ಪಂಖ್ತುಂಖ್ವಾದ ಮುಖ್ಯಮಂತ್ರಿ ಪಿಟಿಐ ಪಕ್ಷದ ಅಲಿ ಅಮಿನ್ ಗಂಡಾಪುರ್ ಅವರು ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಇಮ್ರಾನ್‌ ಬಿಡುಗಡೆಯ ಕುರಿತು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಇಮ್ರಾನ್‌ ಖಾನ್ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದಾರೆ.

ಭಾರತದೊಂದಿಗಿನ ಪ್ರಸ್ತುತ ಯುದ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಸಾಮರಸ್ಯ ಮತ್ತು ಒಗ್ಗಟ್ಟಿಗಾಗಿ, ಅಡಿಯಾಲ ಜೈಲಿನಲ್ಲಿ ಡ್ರೋನ್ ದಾಳಿಯ ಭಯದಿಂದಾಗಿ, ಅವರನ್ನು ತಕ್ಷಣವೇ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕೆಂದು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿನಂತಿಸಲಾಗಿದೆ.

ಈ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಾಲಯ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. 

ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಹತ್ಯೆ ಮಾಡಿದ ಬಳಿಕ ಭಾರತ, ಪಾಕಿಸ್ತಾನ ನಡುವೆ ಸಂಬಂಧ ಹಳಸಿತ್ತು. ಭಾರತ ಆಪರೇಷನ್‌ ಸಿಂಧೂರ ಮೂಲಕ ಪಾಕ್‌ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.