ADVERTISEMENT

ಚಿತ್ರಗಳಲ್ಲಿ ನೋಡಿ.. ಅಫ್ಗಾನಿಸ್ತಾನದ ತಾಲಿಬಾನ್‌ನ ಪ್ರಮುಖರು ಯಾರು?

ಚಿತ್ರಗಳಲ್ಲಿ ನೋಡಿ.. ಅಫ್ಗಾನಿಸ್ತಾನದ ತಾಲಿಬಾನಿನ ಪ್ರಮುಖ ಮುಖಂಡರು ಯಾರು?In Pics Key members of Afghanistans Taliban leadershipಕಾಬೂಲ್: ತಾಲಿಬಾನ್ ಮತ್ತೊಮ್ಮೆ ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದಿದೆ. ಅಮೆರಿಕದ ಮಿಲಿಟರಿ ವಾಪಸ್ ತೆರಳಲು ಆರಂಭಿಸಿದಾಗಿನಿಂದ ಅವರು ಅಫ್ಗಾನಿಸ್ತಾನದ ಒಂದೊಂದೇ ಪ್ರದೇಶವನ್ನು ವಶಪಡಿಸಿಕೊಂಡರು. 34 ಪ್ರಾಂತ್ಯಗಳಲ್ಲಿ ಎಂಟು ರಾಜಧಾನಿಗಳನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ಹೊಸ ಸರ್ಕಾರದ ಉಸ್ತುವಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲವಾದರೂ, ಇಲ್ಲಿ ನಾವು ಅಫ್ಘಾನಿಸ್ತಾನದ ತಾಲಿಬಾನ್‌ನ ಕೆಲವುಪ್ರಮುಖ ನಾಯಕರು ಯಾರೆಂಬುದರ ಬಗ್ಗೆ ಇಲ್ಲಿಚಿತ್ರ ಸಹಿತ ಸಂಕ್ಷಿಪ್ತವಿವರ ನೀಡಲಾಗಿದೆ.

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:17 IST
Last Updated 19 ಆಗಸ್ಟ್ 2021, 13:17 IST
1. ತಾಲಿಬಾನ್ ಭಯೋತ್ಪಾದಕ ಸಂಘಟನೆಯ ಪ್ರಮುಖ ನಾಯಕರು
1. ತಾಲಿಬಾನ್ ಭಯೋತ್ಪಾದಕ ಸಂಘಟನೆಯ ಪ್ರಮುಖ ನಾಯಕರು   
2. ಮುಲ್ಲಾ ಅಬ್ದುಲ್ ಘನಿ ಬರಾದರ್: ತಾಲಿಬಾನ್‌ನ ಸಹ-ಸಂಸ್ಥಾಪಕರಲ್ಲಿ ಒಬ್ಬನಾದ ಬರಾದರ್ ಈಗ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥನಾಗಿದ್ದಾನೆ. ಸಮಾಲೋಚನಾ ತಂಡದ ಭಾಗವಾಗಿದ್ದು, ಈ ಗುಂಪು ಸದ್ಯ ದೋಹಾದಲ್ಲಿ ರಾಜಕೀಯ ಒಪ್ಪಂದವನ್ನು ಹೊಂದಲು ಪ್ರಯತ್ನಿಸುತ್ತಿದೆ. 2010 ರಲ್ಲಿ ದಕ್ಷಿಣ ಪಾಕಿಸ್ತಾನದ ಕರಾಚಿಯಲ್ಲಿ ಮುಲ್ಲಾನನ್ನು ಬಂಧಿಸಿದ್ದ ಭದ್ರತಾ ಪಡೆಗಳು 2018 ರಲ್ಲಿ ಬಿಡುಗಡೆ ಮಾಡಿದ್ದವು. ಚಿತ್ರ: ಎಎಫ್‌ಪಿ
3. ಹೈಬತುಲ್ಲಾ ಅಖುಂಡಜಾದ: ತಾಲಿಬಾನಿಗಳ ‘ನಂಬಿಕಸ್ತ ನಾಯಕ’ಎಂದು ಕರೆಯಲ್ಪಡುವ, ಇಸ್ಲಾಮಿಕ್ ಕಾನೂನು ವಿದ್ವಾಂಸ ಮತ್ತು ತಾಲಿಬಾನ್‌ನ ಸರ್ವೋಚ್ಚ ನಾಯಕ. ಗುಂಪಿನ ರಾಜಕೀಯ, ಧಾರ್ಮಿಕ ಮತ್ತು ಮಿಲಿಟರಿ ವ್ಯವಹಾರಗಳ ಮೇಲೆ ಅಂತಿಮ ಅಧಿಕಾರವನ್ನು ಹೊಂದಿದ್ದಾನೆ. 2016 ರಲ್ಲಿ ಆಫ್ಗಾನ್-ಪಾಕಿಸ್ತಾನ ಗಡಿಯ ಬಳಿ ಅಮೆರಿಕದ ಡ್ರೋನ್ ದಾಳಿಯಲ್ಲಿ ತನ್ನ ಹಿಂದಿನ ವಿದ್ವಾಂಸ ಅಖ್ತರ್ ಮನ್ಸೂರ್ ಹತನಾದಾಗ ಅಖುಂಡಜಾದ ಅಧಿಕಾರ ವಹಿಸಿಕೊಂಡನು. ಚಿತ್ರ: ಎಎಫ್‌ಪಿ
4. ಸಿರಾಜುದ್ದೀನ್ ಹಕ್ಕಾನಿ: ಮುಜಾಹಿದ್ದೀನ್‌ನ ಪ್ರಮುಖ ಕಮಾಂಡರ್ ಜಲಾಲುದ್ದೀನ್ ಹಕ್ಕಾನಿಯ ಮಗ. ಸಿರಾಜುದ್ದೀನ್ ಪಾಕಿಸ್ತಾನ-ಅಫ್ಗಾನಿಸ್ತಾನ ಗಡಿಯುದ್ದಕ್ಕೂ ತಾಲಿಬಾನ್‌ನ ಆರ್ಥಿಕ ಮತ್ತು ಸೇನಾ ಆಸ್ತಿಗಳನ್ನು ನೋಡಿಕೊಳ್ಳುವ ಸಂಘಟಿತವಾದ ಹಕ್ಕಾನಿ ನೆಟ್ವರ್ಕ್ ಅನ್ನು ಮುನ್ನಡೆಸುತ್ತಾನೆ. ಹಕ್ಕಾನಿಗಳು ಅಫ್ಗಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯನ್ನು ಪರಿಚಯಿಸಿದ್ದಾನೆ. ಅಫ್ಗಾನಿಸ್ತಾನದಲ್ಲಿ ಹಲವಾರು ದಾಳಿಗಳಿಗೆ ಕಾರಣರಾಗಿದ್ದಾನೆ ಎಂದು ಕೆಲವು ತಜ್ಞರು ನಂಬಿದ್ದಾರೆ. ಚಿತ್ರ: ರಾಯಿಟರ್ಸ್
5. ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜೈ: ತಾಲಿಬಾನ್ ಸರ್ಕಾರವನ್ನು ಉಚ್ಚಾಟಿಸುವ ಮುನ್ನ ಉಪ ಮಂತ್ರಿಯಾಗಿದ್ದ ಸ್ಟಾನೆಕ್‌ಜೈ ಸುಮಾರು ಒಂದು ದಶಕದಿಂದ ದೋಹಾದಲ್ಲಿ ವಾಸಿಸುತ್ತಿದ್ದನು. 2015 ರಲ್ಲಿ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥನಾಗಿ ಆಯ್ಕೆಯಾದನು. ಹಲವು ದೇಶಗಳ ರಾಜತಾಂತ್ರಿಕ ಪ್ರವಾಸಗಳಲ್ಲಿ ತಾಲಿಬಾನ್ ಅನ್ನು ಪ್ರತಿನಿಧಿಸಿದ್ದಾನೆ. ಚಿತ್ರ: ರಾಯಿಟರ್ಸ್
6. ಮುಲ್ಲಾ ಮೊಹಮ್ಮದ್ ಯಾಕೂಬ್: ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಪುತ್ರ ಯಾಕೂಬ್, ತಾಲಿಬಾನ್ ಸೇನಾ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಾನೆ. ಚಿತ್ರ: ಎಎಫ್‌ಪಿ
7. ಅಬ್ದುಲ್ ಹಕೀಮ್ ಹಕ್ಕಾನಿ: ತಾಲಿಬಾನ್‌ನ ಸಂಧಾನ ತಂಡದ ಮುಖ್ಯಸ್ಥ. ಈ ಫೋಟೋದಲ್ಲಿ, ಹಕ್ಕಾನಿ ಗುಂಪಿನ ನಾಯಕ ಅನಸ್ ಹಕ್ಕಾನಿ ಮತ್ತು ಇತರ ನಾಯಕರು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರ: ಎಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.