ADVERTISEMENT

ಉಕ್ರೇನ್‌ಗೆ ಸೇನಾ ನೆರವು | ಫ್ರಾನ್ಸ್‌ಗೆ ಎಚ್ಚರಿಕೆ ನೀಡಿದ ರಷ್ಯಾ

ಏಜೆನ್ಸೀಸ್
Published 4 ಏಪ್ರಿಲ್ 2024, 15:08 IST
Last Updated 4 ಏಪ್ರಿಲ್ 2024, 15:08 IST
<div class="paragraphs"><p>ಸೆರ್ಗಿ ಶೋಯಿಗೊ </p></div>

ಸೆರ್ಗಿ ಶೋಯಿಗೊ

   

(ರಾಯಿಟರ್ಸ್‌ ಚಿತ್ರ)

ಮಾಸ್ಕೊ: ಉಕ್ರೇನ್‌ಗೆ ಸೇನಾ ನೆರವು ನೀಡಲು ಮುಂದಾಗಿರುವ ಫ್ರಾನ್ಸ್‌ನ ರಕ್ಷಣಾ ಸಚಿವರಿಗೆ ರಷ್ಯಾದ ರಕ್ಷಣಾ ಸಚಿವರು ಬುಧವಾರ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ತನ್ನ ಸೇನೆಯನ್ನು ಉಕ್ರೇನ್‌ಗೆ ಕಳುಹಿಸುವುದರಿಂದ ಫ್ರಾನ್ಸ್‌ಗೆ ಸಮಸ್ಯೆಯಾಗುವ ಸಾಧ್ಯತೆಗಳಿವೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗಿ ಶೋಯಿಗೊ ಅವರು ಫ್ರಾನ್ಸ್‌ ರಕ್ಷಣಾ ಸಚಿವ ಸೆಬಾಸ್ಟಿಯನ್‌ ಲೇಕೊರ್ನು ಅವರಿಗೆ ತಿಳಿಸಿದ್ದಾರೆ’ ಎಂದು ರಷ್ಯಾ ರಕ್ಷಣಾ ಇಲಾಖೆ ತಿಳಿಸಿದೆ.

‘ಮಾರ್ಚ್ 22ರಂದು ಮಾಸ್ಕೋದ ಸಭಾಂಗಣವೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಉಕ್ರೇನ್‌ ಮತ್ತು ಪಶ್ಚಿಮ ರಾಷ್ಟ್ರಗಳ ಕೈವಾಡವಿಲ್ಲ ಎಂದು ಲೆಕ್ರೋನ್‌ ಅವರು ಮಾತುಕತೆಯ ವೇಳೆ ಪ್ರತಿಪಾದಿಸಿದ್ದಾರೆ. ಆದರೆ, ಶಿಯಾ‌ಗೊ ಅವರು, ಸಂಘಟಿತ ಭಯೋತ್ಪಾದಕ ದಾಳಿಯ ಹಿಂದೆ ಉಕ್ರೇನ್‌ ಕೈವಾಡವಿರುವ ಬಗ್ಗೆ ರಷ್ಯಾಕ್ಕೆ ಮಾಹಿತಿ ಇದೆ ಎಂದು ತಿರುಗೇಟು ನೀಡಿದ್ದಾರೆ’ ಎಂದು ರಕ್ಷಣಾ ಇಲಾಖೆ ತಿಳಿಸಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.