ADVERTISEMENT

ಗಡಿಭಾಗದಲ್ಲಿ ಭದ್ರತೆಗೆ ಆದ್ಯತೆ: ಜಿನ್‌ಪಿಂಗ್ ಸೂಚನೆ

ಪಿಟಿಐ
Published 10 ಡಿಸೆಂಬರ್ 2024, 15:06 IST
Last Updated 10 ಡಿಸೆಂಬರ್ 2024, 15:06 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌   

ಬೀಜಿಂಗ್‌: ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಸ್ಥಿರತೆಗೆ ಆದ್ಯತೆ ನೀಡುವ ಮೂಲಕ ದೇಶದ ಗಡಿಭಾಗದಲ್ಲಿನ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಟಿಬೆಟ್‌ ಸೇರಿದಂತೆ ಭಾರತ ಮತ್ತು ಭೂತಾನ್ ಗಡಿ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಗ್ರಾಮಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಹಾಗಾಗಿ, ಗಡಿಭಾಗ ಕುರಿತಂತೆ ಷಿ ಜಿನ್‌ಪಿಂಗ್‌ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ಕಮ್ಯುನಿಸ್ಟ್ ಪಾರ್ಟಿಯ ಅಧಿವೇಶನದಲ್ಲಿ ಮಾತನಾಡಿದ ಜಿನ್‌ಪಿಂಗ್‌, ‘ಚೀನಾದ ಆಧುನೀಕರಣದ ಪ್ರಕ್ರಿಯೆಯಲ್ಲಿ ಯಾವುದೇ ಗಡಿಭಾಗವನ್ನು ಬಿಟ್ಟುಕೊಡಬಾರದು’ ಎಂಬುದಾಗಿ ಹೇಳಿದರು ಎಂದು ಸರ್ಕಾರಿ ಸ್ವಾಮ್ಯದ ಕ್ಸಿನುವಾ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ADVERTISEMENT

ಉತ್ತಮ ರಸ್ತೆ ಸಂಪರ್ಕ ಹೊಂದಿರುವ 600ಕ್ಕೂ ಹೆಚ್ಚು ಸುಸಜ್ಜಿತ ಗ್ರಾಮಗಳನ್ನು ಟಿಬೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಾಧ್ಯಮದಲ್ಲಿನ ಇತ್ತೀಚಿನ ವರದಿಗಳು ತಿಳಿಸಿವೆ. ಗಡಿಭಾಗದ ಎಲ್ಲ ನಗರಗಳಿಗೆ ವಿದ್ಯುತ್‌ ಸೌಲಭ್ಯ ವಿಸ್ತರಿಸಲಾಗಿದೆ. ಅಂಚೆ ಸೇವೆ, ಮೊಬೈಲ್ ಸಂಪರ್ಕ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.