ADVERTISEMENT

ವಿಷಯ ಪರಿಶೀಲನೆಗೆ ಸ್ವತಂತ್ರ ಘಟಕ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಘೋಷಣೆ

ಏಜೆನ್ಸೀಸ್
Published 16 ನವೆಂಬರ್ 2018, 17:58 IST
Last Updated 16 ನವೆಂಬರ್ 2018, 17:58 IST
ಮಾರ್ಕ್‌ ಝುಕರ್‌ಬರ್ಗ್‌
ಮಾರ್ಕ್‌ ಝುಕರ್‌ಬರ್ಗ್‌   

ಸ್ಯಾನ್‌ ಫ್ರಾನ್ಸಿಸ್ಕೊ : ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಳಕೆದಾರರು ಪೋಸ್ಟ್‌ ಮಾಡುವ ವಿಷಯ ಪರಿಶೀಲನೆಗಾಗಿ ಸ್ವತಂತ್ರ ಘಟಕವೊಂದನ್ನು ರಚಿಸುವುದಾಗಿ ಘೋಷಿಸಿದೆ.

ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ, ದ್ವೇಷ ಬಿತ್ತುವ, ಅಸಂಬದ್ಧ ಹಾಗೂ ಅವಹೇಳನಕಾರಿ ವಿಷಯಗಳನ್ನು ಪೋಸ್ಟ್‌ ಮಾಡುತ್ತಿರುವ ಬಗ್ಗೆ ಹಲವಾರು ರಾಷ್ಟ್ರಗಳಿಂದ ದೂರುಗಳು ಕೇಳಿ ಬಂದಿದ್ದವು. ಇಂತಹ ವಿಷಯಗಳನ್ನು ಪೋಸ್ಟ್‌ ಮಾಡುವುದರ ಮೇಲೆ ನಿಷೇಧ ಹೇರಬೇಕು ಎಂಬ ಒತ್ತಡವೂ ಹೆಚ್ಚಿದ ಕಾರಣ, ಫೇಸ್‌ಬುಕ್‌ ಈ ಕ್ರಮಕ್ಕೆ ಮುಂದಾಗಿದೆ.

‘ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸುರಕ್ಷಿತತೆ ಬಗ್ಗೆ ನಾವು ನಮ್ಮಷ್ಟಕ್ಕೇ ತರಹೇವಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ನಂಬಿಕೆ ನನ್ನದು’ ಎಂದು ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ.

ADVERTISEMENT

‘ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾಗುವ ವಿಷಯಗಳಲ್ಲಿ ಯಾವುದನ್ನು ಕೂಡಲೇ ತೆಗೆದು ಹಾಕಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಬಂಧ ಸ್ವತಂತ್ರ ಘಟಕವನ್ನು ಶೀಘ್ರವೇ ರಚನೆ ಮಾಡಲಾಗುವುದು’ ಎಂದೂ ಅವರು ಹೇಳಿದ್ದಾರೆ.

*ಜನರ ಧ್ವನಿಯಾಗುವುದು ಹಾಗೂ ಅವರ ಸುರಕ್ಷತೆ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ
–ಮಾರ್ಕ್‌ ಝುಕರ್‌ಬರ್ಗ್‌,ಸಿಇಒ, ಫೇಸ್‌ಬುಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.