ADVERTISEMENT

ಅಫ್ಗಾನಿಸ್ತಾನ ಕುರಿತ ಕರಡು ನಿರ್ಣಯದಿಂದ ಹೊರಗುಳಿದ ಭಾರತ

ಪಿಟಿಐ
Published 8 ಜುಲೈ 2025, 13:21 IST
Last Updated 8 ಜುಲೈ 2025, 13:21 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ  ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದಂತೆ ಮಂಡಿಸಿದ ಕರಡು ನಿರ್ಣಯ ಕುರಿತಾದ ಮತದಾನಕ್ಕೆ ಭಾರತ ಗೈರುಹಾಜರಾಗಿದೆ.

ಈ ರೀತಿಯ ಸಾಮಾನ್ಯ ಪ್ರಸ್ತಾಪಗಳನ್ನು ಒಳಗೊಂಡ ನಿರ್ಣಯಗಳಿಂದ ಅಫ್ಗಾನಿಸ್ತಾನದ ಜನರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ವಿಶ್ವ ಸಮುದಾಯ ಕೈಗೊಂಡ ಪ್ರಯತ್ನಗಳು ಫಲಿಸುವುದು ಸಾಧ್ಯವಿಲ್ಲ ಎಂದೂ ಪ್ರತಿಪಾದಿಸಿದೆ.

193 ಸದಸ್ಯರಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ‘ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ’ ಎಂಬ ಶೀರ್ಷಿಕೆಯ ಕರಡು ನಿರ್ಣಯವನ್ನು ಜರ್ಮನಿ ಸೋಮವಾರ ಮಂಡಿಸಿತು.

ADVERTISEMENT

ನಿರ್ಣಯದ ಪರವಾಗಿ 166 ಮತಗಳು ಚಲಾವಣೆಯಾಗಿದ್ದು, ಅಮೆರಿಕ ಮತ್ತು ಇಸ್ರೇಲ್‌ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ಭಾರತ ಸೇರಿದಂತೆ 12 ರಾಷ್ಟ್ರಗಳು ಮತದಾನದಿಂದ ಹೊರಗುಳಿದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.