ADVERTISEMENT

ಭದ್ರತಾ ಮಂಡಳಿ ಸದಸ್ಯತ್ವ| ಜನಸಂಖ್ಯೆ ಹೆಚ್ಚಿದಲ್ಲಿ ಭಾರತದ ಬೇಡಿಕೆಗೆ ಹೆಚ್ಚು ಬಲ

ಪಿಟಿಐ
Published 12 ಜುಲೈ 2022, 11:15 IST
Last Updated 12 ಜುಲೈ 2022, 11:15 IST
ವಿಶ್ವಸಂಸ್ಥೆ ಲಾಂಛನ
ವಿಶ್ವಸಂಸ್ಥೆ ಲಾಂಛನ   

ವಿಶ್ವಸಂಸ್ಥೆ: ಭಾರತವು ಮುಂದಿನ ವರ್ಷ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿ, ಚೀನಾವನ್ನು ಹಿಂದಿಕ್ಕಿದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ಸ್ಥಾನ ನೀಡಬೇಕು ಎಂಬ ಅದರ ಬೇಡಿಕೆಗೆ ಹೆಚ್ಚು ಬಲ ಸಿಗಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದರೆ, ಜಾಗತಿಕ ಮಟ್ಟದಲ್ಲಿ ಅದರ ಕೆಲ ಬೇಡಿಕೆಗಳಿಗೆ ಹೆಚ್ಚು ಬಲ ಸಿಗಲಿದೆ’ ಎಂದು ಜನಸಂಖ್ಯೆ ವಿಭಾಗದ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ನಿರ್ದೇಶಕ ಜಾನ್ ವಿಲ್‌ಮಾಥ್ ಹೇಳಿದ್ದಾರೆ.

‘ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ಸ್ಥಾನ ನೀಡಬೇಕು ಎಂಬುದು ಭಾರತದ ಬಹುದಿನಗಳ ಬೇಡಿಕೆ. ಈಗ ದೇಶದ ಜನಸಂಖ್ಯೆ ಹೆಚ್ಚಿದಲ್ಲಿ, ತನ್ನ ಈ ಬೇಡಿಕೆ ಈಡೇರಿಕೆಗೆ ಭಾರತ ಮತ್ತಷ್ಟು ಗಟ್ಟಿಯಾಗಿ ಧ್ವನಿ ಎತ್ತಬಹುದಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.