ADVERTISEMENT

ವಿದ್ವಾಂಸ ತಾಲಿಬ್ ಜೌಹಾರಿ ನಿಧನ

ಪಿಟಿಐ
Published 22 ಜೂನ್ 2020, 8:47 IST
Last Updated 22 ಜೂನ್ 2020, 8:47 IST
ತಾಲಿಬ್ ಜೌಹಾರಿ–ಟ್ವಿಟರ್ ಚಿತ್ರ
ತಾಲಿಬ್ ಜೌಹಾರಿ–ಟ್ವಿಟರ್ ಚಿತ್ರ   

ಕರಾಚಿ: ಭಾರತ ಸಂಜಾತ ಪಾಕಿಸ್ತಾನದ ಶಿಯಾ ವಿದ್ವಾಂಸ ಮತ್ತು ಲೇಖಕ ತಾಲಿಬ್ ಜೌಹಾರಿ (80) ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. 15 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದರು.

1939ರ ಆಗಸ್ಟ್ 27ರಂದು ಪಟ್ನಾದಲ್ಲಿ ಜನಿಸಿದ್ದ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ ಎಂದು ಡಾನ್ ನ್ಯೂಸ್ ಸೋಮವಾರ ವರದಿ ಮಾಡಿದೆ. ದೇಶ ವಿಭಜನೆಯ ಬಳಿಕ 1949ರಲ್ಲಿ ತಮ್ಮ ತಂದೆಯ ಜೊತೆ ಅವರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.

ತಮ್ಮ ತಂದೆಯವರಿಂದ ಆರಂಭಿಕ ಶಿಕ್ಷಣ ಪಡೆದ ಅವರು ಬಳಿಕ ಇರಾಕ್‌ಗೆ‌ ತೆರಳಿ 10 ವರ್ಷಗಳ ಕಾಲ ಶಿಯಾ ವಿದ್ವಾಂಸರ ಬಳಿ ಧಾರ್ಮಿಕ ಅಧ್ಯಯನ ಕೈಗೊಂಡು ಮರಳಿದರು.

ADVERTISEMENT

ಖ್ಯಾತ ವಿದ್ವಾಂಸ ಅಯಾತೊಲ್ಲಾ ಸೈಯಿದ್ ಅಲಿ ಅಲ್ ಹುಸಯಾನಿ ಅಲ್ ಸಿಸ್ತಾನಿ ಅವರ ಸಹವರ್ತಿಯಾಗಿದ್ದ ಜೌಹಾರಿ ಅವರು ಶಿಯಾ ಸಮುದಾಯದ ಗೌರವಾನ್ವಿತ ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ಇವರು ಕವಿ, ಇತಿಹಾಸಕಾರ ಹಾಗೂ ತತ್ವಶಾಸ್ತ್ರಜ್ಞರಾಗಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಜೌಹಾರಿ ನಿಧನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.