ADVERTISEMENT

ನಾಳೆಯಿಂದ ಭಾರತ –ಚೀನಾ ಜಂಟಿ ಸೇನಾ ಕವಾಯತು ಮತ್ತೆ ಆರಂಭ

ಪಿಟಿಐ
Published 10 ಡಿಸೆಂಬರ್ 2018, 6:57 IST
Last Updated 10 ಡಿಸೆಂಬರ್ 2018, 6:57 IST

ಬೀಜಿಂಗ್‌: ಭಾರತ ಮತ್ತು ಚೀನಾದ ಜಂಟಿ ಸೇನಾ ಕವಾಯತು ಒಂದು ವರ್ಷದ ಬಳಿಕ ಇದೇ 11ರಿಂದ ಮತ್ತೆ ಆರಂಭವಾಗಲಿದೆ.

ಭಯೋತ್ಪಾದಕರ ವಿರುದ್ಧ ಹೊರಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಚೀನಾದ ಚೆಂಗ್ಡು ನಗರದಲ್ಲಿ ಕವಾಯತು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದೇಶಗಳ ತಲಾ 100 ತುಕಡಿ ಸೈನಿಕರು ಕವಾಯತಿನಲ್ಲಿ ಪಾಲ್ಗೊಳ್ಳುವರು ಎಂದಿದ್ದಾರೆ.

ಎರಡು ದೇಶಗಳ ನಡುವಿನ ದೋಕಲಾ ಗಡಿ ವಿವಾದದ ಬಳಿಕ ಜಂಟಿ ಸೇನಾ ಕವಾಯತು ಸ್ಥಗಿತಗೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.