ADVERTISEMENT

ಯುದ್ಧದಲ್ಲಿ ರಷ್ಯಾಗೆ ಭಾರತದ ಹಣಕಾಸು: ಟ್ರಂಪ್‌ ನಿಕಟವರ್ತಿ ಆರೋಪ

ರಾಯಿಟರ್ಸ್
Published 3 ಆಗಸ್ಟ್ 2025, 20:31 IST
Last Updated 3 ಆಗಸ್ಟ್ 2025, 20:31 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್‌ (ರಾಯಿಟರ್ಸ್‌): ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಭಾರತವು ಪರಿಣಾಮಕಾರಿಯಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅತ್ಯಂತ ನಿಕಟವರ್ತಿ ಆರೋಪಿಸಿದ್ದಾರೆ. 

ಭಾರತವು ಮಾಸ್ಕೊದಿಂದ ತೈಲ ಖರೀದಿಸುವ ಮೂಲಕ ರಷ್ಯಾಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಅವರು ಭಾನುವಾರ ದೂರಿದ್ದಾರೆ.

ರಷ್ಯಾದಿಂದ ತೈಲ ಖರೀದಿ ವಿಷಯದಲ್ಲಿ ಭಾರತವು ಚೀನಾದ ಜತೆಗೆ ಸಂಬಂಧ ಹೊಂದಿದೆ ಎಂಬುದು ಆಘಾತಕಾರಿ ಮತ್ತು ಆಶ್ಚರ್ಯದ ಸಂಗತಿ’ ಎಂದು ಶ್ವೇತಭವನದ ಉಪ ಮುಖ್ಯಸ್ಥ ಮತ್ತು ಟ್ರಂಪ್‌ ಅವರ  ನಿಕಟವರ್ತಿಯೂ ಆದ ಸ್ಟೀಫನ್‌ ಮಿಲ್ಲರ್‌ ‘ಫಾಕ್ಸ್‌ ನ್ಯೂಸ್‌’ಗೆ ತಿಳಿಸಿದ್ದಾರೆ.  

ADVERTISEMENT

‘ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಭಾರತ ಮುಂದುವರಿಸುವುದು ಸ್ವೀಕಾರಾರ್ಹವಲ್ಲ ಎಂದು ಟ್ರಂಪ್‌ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಮಿಲ್ಲರ್‌ ಅವರ ಹೇಳಿಕೆ ಕುರಿತು, ವಾಷಿಂಗ್ಟನ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. 

Cut-off box - ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌ ಪುನರುಚ್ಚಾರ ನ್ಯೂಯಾರ್ಕ್/ವಾಷಿಂಗ್ಟನ್‌ (ಪಿಟಿಐ): ‘ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸೇನಾ ಸಂಘರ್ಷವನ್ನು ನಿಲ್ಲಿಸಿದ್ದು ನಾವೇ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾನುವಾರ ಪುನರುಚ್ಚರಿಸಿದರು. ಸಂಘರ್ಷದ ವೇಳೆ ರಾತ್ರಿ ದೀರ್ಘಕಾಲ ವಾಷಿಂಗ್ಟನ್‌ ಮಧ್ಯಸ್ಥಿಕೆ ವಹಿಸಿ ನಡೆಸಿದ ಮಾತುಕತೆಯ ಫಲವಾಗಿ ಉಭಯ ದೇಶಗಳು ತಕ್ಷಣ ಮತ್ತು ಪೂರ್ಣಪ್ರಮಾಣದ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದವು ಎಂದು ಟ್ರಂಪ್‌ ಹೇಳಿದರು. ಮೇ 10ರಿಂದ ಟ್ರಂಪ್‌ ಅವರು ಈ ಹೇಳಿಕೆಯನ್ನು ಹಲವು ಬಾರಿ ಪುನರುಚ್ಚಾರ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.