ADVERTISEMENT

‘ಪರಿಸರ ಸ್ನೇಹಿ ಪ್ರಗತಿಗೆ ಭಾರತ–ಜರ್ಮನಿ ಬದ್ಧ’

ಪಿಟಿಐ
Published 20 ಫೆಬ್ರುವರಿ 2022, 12:28 IST
Last Updated 20 ಫೆಬ್ರುವರಿ 2022, 12:28 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ಮ್ಯೂನಿಚ್‌: ಪರಿಸರ ಸ್ನೇಹಿ ಪ್ರಗತಿ ಮತ್ತು ಶುದ್ಧ ತಂತ್ರಜ್ಞಾನದ ಅಭಿವೃದ್ಧಿಗೆ ಉತ್ತೇಜನ ನೀಡಲು ಹಾಗೂ ಸಹಯೋಗ ಹೊಂದಲು ಭಾರತ ಮತ್ತು ಜರ್ಮನಿ ಬದ್ಧವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಖಾತೆ ಸಚಿವ ಸ್ವೆಂಜಾ ಶುಲ್ಜೆ ಅವರೊಂದಿಗೆ ರಚನಾತ್ಮಕ ಸಂವಾದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿದರು. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಅವರು ಇಲ್ಲಿಗೆ ಬಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಜೈಶಂಕರ್, ಅಭಿವೃದ್ಧಿಗೆ ಸಹಭಾಗಿತ್ವ ಕುರಿತು ಚರ್ಚಿಸಿದ್ದೇವೆ. ಪರಿಸರಸ್ನೇಹಿ ಪ್ರಗತಿ ಮತ್ತು ಶುದ್ಧ ತಂತ್ರಜ್ಞಾನದ ಬಳಕೆ ಕುರಿತು ನಮ್ಮ ಬದ್ಧತೆಯನ್ನು ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ADVERTISEMENT

ಇದೇ ಸಂದರ್ಭದಲ್ಲಿ ಅವರು ವಿದೇಶಾಂಗ ಮತ್ತು ಭದ್ರತಾ ನೀತಿಯ ಸಲಹೆಗಾರ ಮತ್ತು ಜರ್ಮನ್‌ ಚಾನ್ಸಲರ್ ಜೆನ್ಸ್ ಪ್ಲೊಟ್ನೆರ್ ಹಾಗೂ ಐರ್ಲೆಂಡ್‌ನ ಸಚಿವ ಸೈಮನ್‌ ಕೊವೆನೆ ಅವರ ಜೊತೆಗೂ ಚರ್ಚಿಸಲಾಯಿತು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.